ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್ ಅವರ ಮೊದಲ ಗುರು ಗೂಗಲ್!
ಮುಂಬೈ: ಪ್ಯಾರಾ ಅಥ್ಲೆಟಿಕ್ಸ್ ಬಗ್ಗೆ ಯಾವುದೇ ಜ್ಞಾನವಿಲ್ಲದ ಹೈಜಂಪರ್ ಪ್ರವೀಣ್ ಕುಮಾರ್ ಕ್ರೀಡೆಯ ಬಗ್ಗೆ ಮೂಲಭೂತ ಮಾಹಿತಿಗಾಗಿ ಗೂಗಲ್ ಅನ್ನು ಅವಲಂಬಿಸಿದ್ದರು. ಗೂಗಲ್ ಅವರ ಮೊದಲ ಗುರುವಾಗಿತ್ತು ಎಂಬ ವಿಚಾರ ಅವರೇ ಬಹಿರಂಗಪಡಿಸಿದ್ದಾರೆ,
"ನಾನು ಗೂಗಲ್ ನಲ್ಲಿ ಎತ್ತರ ಜಿಗಿತದ ವೀಡಿಯೋಗಳನ್ನು ನೋಡುತ್ತಿದ್ದೆ ಹಾಗೂ ಅದರಿಂದ ಕಲಿಯಲು ಪ್ರಯತ್ನಿಸುತ್ತಿದ್ದೆ. ನನಗೆ ಕಲಿಸಲು ಯಾರೂ ಇರಲಿಲ್ಲ. ನಂತರ ಜಿಲ್ಲಾ ಮಟ್ಟದ ಸಭೆಯಲ್ಲಿ ತರಬೇತುದಾರ ಡಾ. ಸತ್ಯಪಾಲ್ ಅವರ ಬಗ್ಗೆ ನನಗೆ ತಿಳಿಸಲಾಯಿತು ಹಾಗೂ ಅವರು ನನಗೆ ತರಬೇತಿ ನೀಡಲು ಒಪ್ಪಿದರು" ಎಂದು ಶುಕ್ರವಾರ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ ಹೈ ಜಂಪ್ ಟಿ44 ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್ ಹೇಳಿದರು.
ಇಲ್ಲಿಯವರೆಗಿನ ಪ್ರಯಾಣದ ಬಗ್ಗೆ ಪ್ರವೀಣ್ ರನ್ನು ಕೇಳಿದಾಗ, ಆರಂಭದಲ್ಲಿ ವಾಲಿಬಾಲ್‌ನಲ್ಲಿ ಆಸಕ್ತಿ ಹೊಂದಿದ್ದೆ. ಬಳಿಕ ಎತ್ತರದ ಜಿಗಿತವನ್ನುಇಷ್ಟಪಟ್ಟೆ. ಇಲ್ಲಿಯವರೆಗೆ ತಲುಪುತ್ತೇನೆ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಯಶಸ್ವಿಯಾಗುತ್ತೇನೆ ಎಂಬ ನಂಬಿಕೆ ಇರಲಿಲ್ಲ ಎಂದು ಹೇಳಿದರು.