ಅಫ್ಘಾನಿಸ್ತಾನ ಟಿ-20 ಕ್ರಿಕೆಟ್‌ ತಂಡದ ನಾಯಕತ್ವ ತ್ಯಜಿಸಿದ ರಶೀದ್‌ ಖಾನ್:‌ ಕಾರಣವೇನು ಗೊತ್ತೇ?

Update: 2021-09-10 06:13 GMT
Photo: twitter/cricketworldcup

ಹೊಸದಿಲ್ಲಿ: ಆಶ್ಚರ್ಯಕರ ನಿರ್ಧಾರವೆಂಬಂತೆ ಅಫ್ಘಾನಿಸ್ತಾನ ಟಿ-20 ಕ್ರಿಕೆಟ್‌ ತಂಡದ ನಾಯಕತ್ವ ಸ್ಥಾನಕ್ಕೆ ಖ್ಯಾತ ಸ್ಪಿನ್ನರ್‌ ರಶೀದ್‌ ಖಾನ್‌ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ. ಮುಂಬರುವ ವಿಶ್ವಕಪ್‌ ಟಿ-20 ಕ್ರಿಕೆಟ್‌ ಪಂದ್ಯಾಕೂಕ್ಕೆ ತಮ್ಮ ಅಭಿಪ್ರಾಯವನ್ನು ಪರಿಗಣಿಸದೇ ತಂಡವನ್ನು ಅಂತಿಮಗೊಳಿಸಲಾಗಿದೆ ಎಂದು ರಶೀದ್‌ ಖಾನ್‌ ಆರೋಪಿಸಿದ್ದಾರೆ.

ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಪಂದ್ಯಾಕೂಟಕ್ಕೆ ರಶೀದ್‌ ಖಾನ್‌ ರನ್ನು ನಾಯಕರನ್ನಾಗಿ ಅಫ್ಘಾನ್‌ ಕ್ರಿಕೆಟ್‌ ಮಂಡಳಿಯು ನೇಮಿಸಿತ್ತು. "ರಾಷ್ಟ್ರೀಯ ತಂಡದ ನಾಯಕ ಮತ್ತು ಓರ್ವ ಜವಾಬ್ದಾರಿಯ ವ್ಯಕ್ತಿಯಾಗಿ ನಾನು ತಂಡದ ಆಯ್ಕೆಯ ಭಾಗವಾಗಿರುವ ಹಕ್ಕನ್ನು ಹೊಂದಿದ್ದೇನೆ" ಎಂದು ರಶೀದ್ ತಮ್ಮ ಟ್ವಿಟರ್‌ ನಲ್ಲಿ ಹೇಳಿಕೆ ನೀಡಿದ್ದಾರೆ.

"ಅಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ ನ ಮಾಧ್ಯಮವು ಪ್ರಕಟಿಸಿರುವ ತಂಡದ ಕುರಿತು ಆಯ್ಕೆ ಸಮಿತಿ ಹಾಗೂ ಎಸಿಬಿ ನನ್ನ ಒಪ್ಪಿಗೆ ಪಡೆದಿಲ್ಲ". ನಾನು ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಅಫ್ಘಾನಿಸ್ತಾನಕ್ಕಾಗಿ ಆಡುವುದು ಯಾವತ್ತೂ ನನಗೆ ಹೆಮ್ಮೆಯಾಗಿರಲಿದೆ" ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News