ಯುಎಸ್ ಓಪನ್ ಫೈನಲ್ ಪಂದ್ಯದ ವೇಳೆ ಹತಾಶೆಯಲ್ಲಿ ರಾಕೆಟ್ ಪುಡಿಗಟ್ಟಿದ ನೊವಾಕ್ ಜೊಕೊವಿಕ್

Update: 2021-09-13 07:41 GMT
photo: AFP

ನ್ಯೂಯಾರ್ಕ್: ರವಿವಾರ ನಡೆದ ಅಮೆರಿಕನ್  ಓಪನ್ ಫೈನಲ್‌ನಲ್ಲಿ ರಶ್ಯದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ ಎರಡನೇ ಸೆಟ್‌ನಲ್ಲಿ ಆಡುತ್ತಿದ್ದಾಗ ನೊವಾಕ್ ಜೊಕೊವಿಕ್  ಮೂಡ್ ಚೆನ್ನಾಗಿರಲಿಲ್ಲ. 2ನೇ ಸೆಟ್ ನ  ನಾಲ್ಕನೇ ಗೇಮ್ ನಲ್ಲಿ ಒಂದು ಪಾಯಿಂಟ್ ಕಳೆದುಕೊಂಡಾಗ ಹತಾಶರಾದ 34 ರ ಹರೆಯದ ಜೊಕೊವಿಕ್  ಕೋರ್ಟ್ ಫ್ಲೋರ್ ನಲ್ಲಿ  ತನ್ನ ರಾಕೆಟ್ ಅನ್ನು ಪುಡಿಗಟ್ಟಿ  ತನ್ನ ಹತಾಶೆಯನ್ನು ವ್ಯಕ್ತಪಡಿಸಿದರು.

ವಿಶ್ವದ ನಂ.2ನೇ ಆಟಗಾರ ಜೊಕೊವಿಕ್ ಯುಎಸ್ ಓಪನ್ ಗೆಲ್ಲುವ ಫೇವರಿಟ್ ಆಟಗಾರನಾಗಿದ್ದರು. ಆದರೆ ಮೆಡ್ವೆಡೆವ್  ಫೈನಲ್ ಪಂದ್ಯವನ್ನು 6-4, 6-4, 6-4 ನೇರ ಸೆಟ್ ಗಳಲ್ಲಿ ಗೆಲುವು ದಾಖಲಿಸಿ, ತನ್ನ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.  ಮಡ್ವೆಡೆವ್ ಗೆಲುವಿನಿಂದಾಗಿ ಜೊಕೊವಿಕ್ ಅಮೆರಿಕನ್ ಓಪನ್, ಫ್ರೆಂಚ್ ಓಪನ್,  ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಅನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿ ಒಂದೇ ವರ್ಷದಲ್ಲಿ ಎಲ್ಲ 4 ಪ್ರಮುಖ ಪ್ರಶಸ್ತಿ ಗೆಲ್ಲುವುದರಿಂದ ವಂಚಿತರಾದರು.

ಜೊಕೊವಿಕ್ ತನ್ನ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿಯನ್ನು ಕಳೆದುಕೊಂಡರು. ಅವರು ಈಗಾಗಲೇ   20 ಪುರುಷರ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಜಯಿಸಿ ರೋಜರ್ ಫೆಡರರ್ ಹಾಗೂ  ರಫೆಲ್ ನಡಾಲ್  ದಾಖಲೆ ಸರಿಗಟ್ಟಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಮೆಡ್ವೆಡೆವ್ ಅವರು ಇತಿಹಾಸವನ್ನು ಸೃಷ್ಟಿಸುವುದನ್ನು ನಿರಾಕರಿಸಿದ್ದಕ್ಕೆ ಜೊಕೊವಿಕ್ ಹಾಗು  ಅವರ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ ಎಂದರು.

"ನಿಮ್ಮ ಅಭಿಮಾನಿಗಳು ಹಾಗೂ ನೊವಾಕ್‌ಗೆ ಕ್ಷಮೆ ಕೇಳುವೆ.  ಏಕೆಂದರೆ ಅವರು ಏನು ಸಾಧನೆ ಮಾಡಲು ಹೊರಟ್ಟಿದ್ದರೆಂದು ನಮಗೆಲ್ಲರಿಗೂ ತಿಳಿದಿದೆ. ಅವರು ಇತಿಹಾಸದ ಶ್ರೇಷ್ಠ ಟೆನಿಸ್ ಆಟಗಾರ" ಎಂದು ಮಡ್ವೆಡೆವ್  ಹೇಳಿದರು.

ಇದೇ ವೇಳೆ, ಜೊಕೊವಿಕ್  25 ವರ್ಷದ ಮೆಡ್ವೆಡೆವ್ ಅವರನ್ನು  ಅಭಿನಂದಿಸಿದರು ಹಾಗೂ ಅವರು ಗೆಲುವಿಗೆ ಅರ್ಹರು ಎಂದು ಹೇಳಿದರು.

 "ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗೆ ಅರ್ಹರು ಯಾರಾದರೂ ಇದ್ದರೆ, ಅದು ನೀವೇ" ಎಂದು ಜೊಕೊವಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News