ಟಿ-20 ವಿಶ್ವಕಪ್‌: ಪಾಕಿಸ್ತಾನದ ಕೋಚ್ ಗಳಾಗಿ ಹೇಡನ್, ಫಿಲ್ಯಾಂಡರ್ ನೇಮಕ

Update: 2021-09-13 16:55 GMT
ಫಿಲ್ಯಾಂಡರ್,ಹೇಡನ್  photo: Indian express

ಲಾಹೋರ್: ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಓಪನರ್ ಮ್ಯಾಥ್ಯೂ ಹೇಡನ್ ಹಾಗೂ  ದಕ್ಷಿಣ ಆಫ್ರಿಕಾದ ಮಾಜಿ ವೇಗಿ ವೆರ್ನಾನ್ ಫಿಲ್ಯಾಂಡರ್ ಅವರನ್ನು ಮುಂಬರುವ ಯುಎಇನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ  ಪಾಕಿಸ್ತಾನ ತಂಡದ ತರಬೇತುದಾರರನ್ನಾಗಿ ನೇಮಿಸಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಿಸಿದೆ.

ಹೊಸದಾಗಿ ಆಯ್ಕೆಯಾದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧ್ಯಕ್ಷ ರಮೀಝ್ ರಾಜಾ ಅವರು ನೇಮಕಾತಿಗಳನ್ನು ಘೋಷಿಸಿದ್ದಾರೆ.

ಮುಖ್ಯ ಕೋಚ್ ಮಿಸ್ಬಾವುಲ್ ಹಕ್ ಹಾಗೂ  ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್ ಎರಡು ವರ್ಷಗಳ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಒಂದು ವಾರದ ನಂತರ ಹೇಡನ್ ಮತ್ತು ಫಿಲ್ಯಾಂಡರ್ ಅವರ ನೇಮಕಾತಿ ನಡೆದಿದೆ.

"ಪಾಕಿಸ್ತಾನ ತಂಡಕ್ಕೆ ಹೊಸ ನಿರ್ದೇಶನದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾವು ಹೇಡನ್ ಹಾಗೂ  ಫಿಲ್ಯಾಂಡರ್ ಅವರನ್ನು ವಿಶ್ವಕಪ್‌ಗೆ ನೇಮಿಸಿದ್ದೇವೆ" ಎಂದು ರಾಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ ಪಾಕಿಸ್ತಾನವು ರಿಚರ್ಡ್ ಪೈಬಸ್, ಬಾಬ್ ವೂಲ್ಮರ್, ಜೆಫ್ ಆವ್ಸನ್, ಡೇವ್ ವಾಟ್ಮೋರ್ ಮತ್ತು ಮಿಕ್ಕಿ ಆರ್ಥರ್ ಸೇರಿದಂತೆ ಅನೇಕ ವಿದೇಶಿ ಕೋಚ್‌ಗಳನ್ನು ನೇಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News