ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ ಶ್ರೀಲಂಕಾ ವೇಗಿ ಲಸಿತ್‌ ಮಾಲಿಂಗ

Update: 2021-09-14 13:42 GMT

ಕೊಲಂಬೊ: ತನ್ನ ವಿಭಿನ್ನ ಶೈಲಿಯ ಯಾರ್ಕರ್‌ ಗಳಿಂದ ಬ್ಯಾಟ್ಸ್‌ ಮೆನ್‌ ಗಳನ್ನು ಭಯಭೀತಗೊಳಿಸುತ್ತಿದ್ದ ಶ್ರೀಲಂಕಾ ಕ್ರಿಕೆಟ್‌ ತಂಡದ ಅನುಭವಿ ವೇಗಿ ಲಸಿತ್‌ ಮಾಲಿಂಗಾ ಎಲ್ಲಾ ಪ್ರಕಾರಗಳ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. 

2014ರಲ್ಲಿ ನಡೆದ ಟಿ-ಟ್ವೆಂಟಿ ವಿಶ್ವಕಪ್‌ ನಲ್ಲಿ ವಿಜೇತರಾಗಿದ್ದ ಶ್ರೀಲಂಕಾ ತಂಡದ ನಾಯಕತ್ವವನ್ನು ಮಾಲಿಂಗ ವಹಿಸಿಕೊಂಡಿದ್ದರು. ತಮ್ಮ ನಿವೃತ್ತಿಯ ಕುರಿತು ಅಧಿಕೃತ ಸಾಮಾಜಿಕ ತಾಣ ಖಾತೆಯಲ್ಲಿ ಅವರು ಪ್ರಕಟಿಸಿದ್ದಾರೆ. 

"ನನ್ನ ಟಿ-ಟ್ವೆಂಟಿ ಶೂಗಳನ್ನು ತೂಗುಹಾಕುತ್ತಿದ್ದೇನೆ. ನಾನು ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ನನ್ನ ಅನುಭವಗಳನ್ನು ಯುವ ಕ್ರಿಕೆಟಿಗರಿಗೆ ಹಂಚಿಕೊಳ್ಳಲು ಎದುರುನೋಡುತ್ತಿದ್ದೇನೆ" ಎಂದು ಮಾಲಿಂಗ ಟ್ವೀಟ್‌ ಮಾಡಿದ್ದಾರೆ.

ಮಾಲಿಂಗ ಅವರು ಈ ವರ್ಷದ ಜನವರಿಯಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು ಆದರೆ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವಾಗಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News