ಭದ್ರತಾ ಭೀತಿಯ ಕಾರಣ ನೀಡಿ ಪಾಕ್ ಕ್ರಿಕೆಟ್ ಪ್ರವಾಸದಿಂದ ಹಿಂದೆ ಸರಿದ ನ್ಯೂಝಿಲ್ಯಾಂಡ್

Update: 2021-09-17 13:58 GMT
 Photo Credit: AP

ರಾವಲ್ಪಿಂಡಿ: ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಶುಕ್ರವಾರ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯದ ಆರಂಭಕ್ಕೆ ಮೊದಲು ಭದ್ರತಾ ಬೆದರಿಕೆ ಕಾರಣ ನೀಡಿ ಪಾಕಿಸ್ತಾನ ಕ್ರಿಕೆಟ್ ಪ್ರವಾಸವನ್ನು ಕೈಬಿಟ್ಟಿದೆ. ಆತಿಥೇಯ ಮಂಡಳಿ ಅಸ್ತಿತ್ವದಲ್ಲಿಲ್ಲ ಎಂದು ಪ್ರತಿಪಾದಿಸಿದೆ.

ವೈಟ್ ಬಾಲ್ ಸರಣಿಯ ಮೊದಲ ಏಕದಿನ ಪಂದ್ಯವು ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಸಮಯ ಕಳೆದರೂ ಎರಡೂ ತಂಡಗಳು ತಮ್ಮ ಹೋಟೆಲ್ ಕೋಣೆಗಳಿಂದ ಹೊರ ಬಂದಿರಲಿಲ್ಲ. ಈ ಮೂಲಕ ಸಮಸ್ಯೆ ಆರಂಭವಾಯಿತು.

"ಇದು ಪಿಸಿಬಿಗೆ ದೊಡ್ಡ ಹಿನ್ನಡೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅವರು ನಮಗೆ ಉತ್ತಮ ಆತಿಥ್ಯ ನೀಡಿದ್ದರು. ಆದರೆ ಆಟಗಾರರ ಸುರಕ್ಷತೆಯು ಅತ್ಯುನ್ನತವಾಗಿದೆ ಹಾಗೂ  ಸದ್ಯ ಇದು ನಮ್ಮ ಮುಂದಿರುವ ಜವಾಬ್ದಾರಿಯುತ ಆಯ್ಕೆಯಾಗಿದೆ ಎಂದು ನಾವು ನಂಬುತ್ತೇವೆ" ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ವೈಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ನ್ಯೂಝಿಲ್ಯಾಂಡ್ ಏಕಪಕ್ಷೀಯವಾಗಿ ಸರಣಿಯನ್ನು ಮುಂದೂಡಲು ನಿರ್ಧರಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

"ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಸರಕಾರವು ದೇಶಕ್ಕೆ ಭೇಟಿ ನೀಡುವ ಎಲ್ಲಾ ತಂಡಗಳಿಗೆ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ನಾವು ನ್ಯೂಝಿಲ್ಯಾಂಡ್ ಕ್ರಿಕೆಟ್‌ಗೆ ಭರವಸೆ ನೀಡಿದ್ದೇವೆ’’ ಎಂದು ಪಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News