ಅಫ್ಘಾನಿಸ್ತಾನವನ್ನು ಹೊರಗಿನಿಂದ ನಿಯಂತ್ರಿಸಲು ಸಾಧ್ಯವಾಗಿಲ್ಲ: ಎಸ್ಸಿಒ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ

Update: 2021-09-17 16:55 GMT

ಇಸ್ಲಾಮಾಬಾದ್, ಸೆ.17: ಅಫ್ಘಾನಿಸ್ತಾನವನ್ನು ಹೊರಗಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಯುದ್ಧದಿಂದ ಜರ್ಝರಿತಗೊಂಡಿರುವ ಅಫ್ಘಾನ್ಗೆ ತಮ್ಮ ದೇಶ ನೀಡುತ್ತಿರುವ ನೆವು ಮುಂದುವರಿಯಲಿದೆ ಎಂದಿದ್ದಾರೆ.

 ತಾಜಿಕಿಸ್ತಾನದ ರಾಜಧಾನಿ ದುಷಾಂಬೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ) ಯ ಶೃಂಗಸಭೆಯನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಇಮ್ರಾನ್ ಖಾನ್, ಈಗ ತಾಲಿಬಾನ್ನ ಆಡಳಿತದಲ್ಲಿರುವ ಅಫ್ಘಾನ್ಗೆ ಮಾನವೀಯ ನೆರವು ಒದಗಿಸಲು ತ್ವರಿತವಾಗಿ ಅಂತರಾಷ್ಟ್ರೀಯ ಬೆಂಬಲವನ್ನು ಕೊ್ರೀಢೀಕರಿಸುವ ಅಗತ್ಯವಿದೆ ಎಂದರು.

ಅಫ್ಘಾನ್ ಸರಕಾರ ಮೂಲತಃ ವಿದೇಶೀ ನೆರವನ್ನು ಅವಲಂಬಿಸಿದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ಇದೇ ವೇಳೆ ತಾಲಿಬಾನ್ ಕೂಡಾ ತಾನು ನೀಡಿರುವ ವಾಗ್ದಾನವನ್ನು ಮರೆಯಬಾರದು. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿರಬೇಕು ಎಂಬುದು ಪಾಕಿಸ್ತಾನದ ಪ್ರಮುಖ ಆಶಯವಾಗಿದೆ. ಅಫ್ಘಾನಿಸ್ತಾನವನ್ನು ಹೊರಗಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ಹೇಳಿರುವುಾಗಿ ಡಾನ್ ದಿನಪತ್ರಿಕೆ ವರದಿ ಮಾಡಿದೆ.

ಚೀನಾ, ರಶ್ಯಾ, ಕಝಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ, ಭಾರತ ಮತ್ತು ಪಾಕಿಸ್ತಾನ ಈ 8 ರಾಷ್ಟ್ರಗಳ ಎಸ್ಸಿಒ ಸಂಘಟನೆಯಲ್ಲಿಅಫ್ಘಾನಿಸ್ತಾನ ವೀಕ್ಷಕ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News