ಮುಖ್ಯ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ಸಂಪರ್ಕಿಸುವ ಸಾಧ್ಯತೆ: ವರದಿ

Update: 2021-09-18 14:20 GMT

ಹೊಸದಿಲ್ಲಿ:ಟ್ವೆಂಟಿ-20 ವಿಶ್ವಕಪ್ ನಂತರ ರವಿ ಶಾಸ್ತ್ರಿ ತನ್ನ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ  ಸೌರವ್ ಗಂಗುಲಿ ನೇತೃತ್ವದ ಬಿಸಿಸಿಐ ಅನಿಲ್ ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ  ಭಾರತೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕೇಳಬಹುದು ಎಂದು ವರದಿಯಾಗಿದೆ.

 ಲೆಗ್ ಸ್ಪಿನ್ ದಂತಕತೆ ಕುಂಬ್ಳೆ 2016-17ರ ನಡುವೆ ಒಂದು ವರ್ಷದ ಕಾಲ ಭಾರತೀಯ ತಂಡದ ಕೋಚ್ ಆಗಿದ್ದರು.  ಸಚಿನ್ ತೆಂಡುಲ್ಕರ್, ಲಕ್ಷ್ಮಣ್ ಹಾಗೂ  ಗಂಗುಲಿ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಶಾಸ್ತ್ರಿಯವರ ಬದಲಿಗೆ ಕುಂಬ್ಳೆ ಅವರನ್ನು ಕೋಚ್ ಆಗಿ ನೇಮಿಸಿತ್ತು. ಆದಾಗ್ಯೂ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ನಂತರ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಕಹಿ ವೈಮನಸ್ಸಿನಿಂದಾಗಿ ಕುಂಬ್ಳೆ ಅವರು ರಾಜೀನಾಮೆ ನೀಡಿದ್ದರು.

ಕುಂಬ್ಳೆ ಜೊತೆಗೆ, ಮಂಡಳಿಯು ಲಕ್ಷ್ಮಣ್ ಅವರನ್ನು ಸಂಪರ್ಕಿಸಬಹುದು, ಅವರು ಕೆಲವು ವರ್ಷಗಳಿಂದ ಐಪಿಎಲ್ ತಂಡದ ಸನ್ ರೈಸರ್ಸ್ ಹೈದರಾಬಾದ್‌ನ ಮಾರ್ಗದರ್ಶಕರಾಗಿದ್ದಾರೆ. ಲಕ್ಷ್ಮಣ್ ಸ್ಪರ್ಧೆಯಲ್ಲಿ ಉಳಿದರೂ ಕುಂಬ್ಳೆ ಕೋಚ್ ಹುದ್ದೆಗೆ ಫೇವರಿಟ್ ಆಗಿದ್ದಾರೆ.

ಬಿಸಿಸಿಐಗೆ ಪ್ರತಿಷ್ಠಿತ ಭಾರತೀಯ ತರಬೇತುದಾರ ಯಾವಾಗಲೂ ಮೊದಲ ಆಯ್ಕೆಯಾಗಿದ್ದು, ಕುಂಬ್ಳೆ ಹಾಗೂ ಲಕ್ಷ್ಮಣ್ 100 ಕ್ಕೂ ಟೆಸ್ಟ್ ಪಂದ್ಯಗಳ ಜೊತೆಗೆ ಕೋಚಿಂಗ್ ಅನುಭವದೊಂದಿಗೆ ಭಾರತೀಯ ಕ್ರಿಕೆಟ್ ನಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News