ಹೃದಯಾಘಾತದ ವೇಳೆ ಪಾರ್ಶ್ವವಾಯುವಿಗೆ ತುತ್ತಾಗಿ ಜೀವನದ ದೊಡ್ಡ ಸವಾಲು ಎದುರಿಸುತ್ತಿರುವೆ: ಕ್ರಿಸ್ ಕೇರ್ನ್ಸ್

Update: 2021-09-20 14:40 GMT

ಹೊಸದಿಲ್ಲಿ: ಹೃದಯಾಘಾತದ ವೇಳೆ ಪಾರ್ಶ್ವವಾಯುವಿಗೆ ತುತ್ತಾಗಿ ತನ್ನ ಜೀವನದ ಬಹುದೊಡ್ಡ ಸವಾಲನ್ನು ಎದುರಿಸುತ್ತಿದ್ದೇನೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ದಿಗ್ಗಜ ಕ್ರಿಸ್ ಕೇರ್ನ್ಸ್ ಸೋಮವಾರ ಹೇಳಿದ್ದಾರೆ.

2000 ರ ದಶಕದ ಆರಂಭದಲ್ಲಿ ವಿಶ್ವದ ಅಗ್ರಗಣ್ಯ ಆಲ್ ರೌಂಡರ್‌ಗಳಲ್ಲಿ ಒಬ್ಬರಾಗಿದ್ದ 51 ವರ್ಷದ ಕೇರ್ನ್ಸ್ ಅವರು ಕಳೆದ ತಿಂಗಳು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದರು. ಕ್ಯಾನ್ಬೆರಾ ಮೂಲದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಸಿಡ್ನಿಯಲ್ಲಿ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.  ಆದರೆ ಈ ವೇಳೆ ಅವರು ಪಾರ್ಶ್ವವಾಯುವಿಗೆ ಒಳಗಾದರು. ಇದರಿಂದಾಗಿ ಅವರ ಕಾಲುಗಳು ಬಲಹೀನವಾಗಿವೆ.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡ ಕೈರ್ನ್ಸ್ ಅವರು "ನನ್ನ ಜೀವವನ್ನು ಉಳಿಸಿದ" ಶಸ್ತ್ರಚಿಕಿತ್ಸಕರು, ವೈದ್ಯರು, ದಾದಿಯರಿಗೆ ಧನ್ಯವಾದ ಹೇಳಿದರು. "ಮುಂದೆ ಸಾಗುವ ಹಾದಿ ದೀರ್ಘವಿದೆ'' ಎನ್ನುವುದನ್ನು ಒಪ್ಪಿಕೊಂಡರು.

ಕೈರ್ನ್ಸ್ 1989 ಹಾಗೂ  2004 ರ ನಡುವೆ 62 ಟೆಸ್ಟ್‌ಗಳನ್ನು ಆಡಿದರು. ಬೌಲಿಂಗ್ ನಲ್ಲಿ 29.4 ಹಾಗೂ ಬ್ಯಾಟ್‌ನೊಂದಿಗೆ 33.53 ಸರಾಸರಿಯೊಂದಿಗೆ 87 ಸಿಕ್ಸರ್‌ಗಳನ್ನು ಸಿಡಿಸಿದ್ದು  ಆ ಸಮಯದಲ್ಲಿ ಇದು ವಿಶ್ವ ದಾಖಲೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News