×
Ad

ಪಾಕಿಸ್ತಾನಕ್ಕೆ ಪುರುಷರ,ಮಹಿಳೆಯರ ಕ್ರಿಕೆಟ್ ಪ್ರವಾಸಗಳನ್ನು ರದ್ದುಗೊಳಿಸಿದ ಇಂಗ್ಲೆಂಡ್

Update: 2021-09-20 21:44 IST
photo: twitter

ಲಂಡನ್ : ಭದ್ರತಾ ದೃಷ್ಟಿಯಿಂದ ನ್ಯೂಝಿಲ್ಯಾಂಡ್ ತನ್ನ ಸರಣಿಯನ್ನು ಕೈಬಿಟ್ಟ ಕೆಲ ದಿನಗಳ ನಂತರ ಇಂಗ್ಲೆಂಡ್ ಕ್ರಿಕೆಟ್ ಮುಖ್ಯಸ್ಥರು ಪಾಕಿಸ್ತಾನಕ್ಕೆ ಮುಂಬರುವ ಪುರುಷರ ಹಾಗೂ  ಮಹಿಳೆಯರ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ.

ಪುರುಷರ ಕ್ರಿಕೆಟ್ ತಂಡವು ಅಕ್ಟೋಬರ್ 13 ಹಾಗೂ  14 ರಂದು ಎರಡು ಟ್ವೆಂಟಿ -20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿತ್ತು. ಮಹಿಳೆಯರ ಕ್ರಿಕೆಟ್ ತಂಡವು ಅಕ್ಟೋಬರ್ 17, 19 ಹಾಗೂ  21 ರಂದು ಮೂರು ಏಕದಿನ ಪಂದ್ಯಗಳನ್ನು ಆಡಬೇಕಾಗಿತ್ತು. ಎಲ್ಲಾ ಪಂದ್ಯಗಳು ರಾವಲ್ಪಿಂಡಿಯ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿತ್ತು.

"ಪಾಕಿಸ್ತಾನಕ್ಕೆ ಪ್ರಯಾಣಿಸುವುದರ ಬಗ್ಗೆ ಹೆಚ್ಚುತ್ತಿರುವ ಕಳವಳದ ಬಗ್ಗೆ ನಮಗೆ ತಿಳಿದಿದೆ. ಈಗಾಗಲೇ ನಿರ್ಬಂಧಿತ ಕೋವಿಡ್ ಪರಿಸರದಲ್ಲಿ ದೀರ್ಘಾವಧಿಯ ಕೆಲಸ ಮಾಡಿರುವ  ಗುಂಪಿಗೆ ಇದು ಮತ್ತಷ್ಟು ಒತ್ತಡವನ್ನು ನೀಡುತ್ತದೆ ಎಂದು ನಂಬಲಾಗಿದೆ" ಎಂದು ಇಂಗ್ಲೆಂಡ್ ಹಾಗೂ  ವೇಲ್ಸ್ ಕ್ರಿಕೆಟ್‌ ಮಂಡಳಿಯ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News