ಗಳಿಕೆಯಲ್ಲಿ ಮೆಸ್ಸಿಯನ್ನು ಹಿಂದಿಕ್ಕಿದ ರೊನಾಲ್ಡೊ

Update: 2021-09-22 16:51 GMT
photo: instagram /@leomessi | @cristiano

ಮ್ಯಾಂಚೆಸ್ಟರ್, ಸೆ. 22: ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ವರ್ಗಾವಣೆಗೊಂಡ ಬಳಿಕ ಅತ್ಯಧಿಕ ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರನಾಗಿ ಹೊರಹೊಮ್ಮಿದ್ದು ಲಿಯೊನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ ಎಂದು ಫೋರ್ಬ್ಸ್ ಪತ್ರಿಕೆ ಹೇಳಿದೆ.

2021-22ರ ಋತುವಿನಲ್ಲಿ ರೊನಾಲ್ಡೊ 125 ಮಿಲಿಯ ಡಾಲರ್ (ಸುಮಾರು 922 ಕೋಟಿ ರೂಪಾಯಿ) ಗಳಿಸಲಿದ್ದಾರೆ. ಇದರಲ್ಲಿ 70 ಮಿಲಿಯ ಡಾಲರ್ (ಸುಮಾರು 516 ಕೋಟಿ ರೂಪಾಯಿ) ಅವರ ವೇತನ ಮತ್ತು ಬೋನಸ್ ಆಗಿದೆ. ಅವರು ಸುಮಾರು 55 ಮಿಲಿಯ ಡಾಲರ್ (ಸುಮಾರು 406 ಕೋಟಿ ರೂಪಾಯಿ) ಜಾಹೀರಾತುಗಳಿಂದ ಗಳಿಸಲಿದ್ದಾರೆ.

ಜಾಹೀರಾತುಗಳಲ್ಲಿ ರೊನಾಲ್ಡೊಗಿಂತ ಹೆಚ್ಚು ಗಳಿಸುವ ಕ್ರೀಡಾಪಟುಗಳು ಕೇವಲ ಮೂವರು. ಅವರೆಂದರೆ ರೋಜರ್ ಫೆಡರರ್ (90 ಮಿಲಿಯ ಡಾಲರ್- ಸುಮಾರು 664 ಕೋಟಿ ರೂಪಾಯಿ)), ಲೆಬ್ರಾನ್ ಜೇಮ್ಸ್ (65 ಮಿಲಿಯ ಡಾಲರ್- ಸುಮಾರು 480 ಕೋಟಿ ರೂಪಾಯಿ) ಮತ್ತು ಟೈಗರ್ ವುಡ್ಸ್ (60 ಮಿಲಿಯ ಡಾಲರ್- ಸುಮಾರು 442 ಕೋಟಿ ರೂಪಾಯಿ).

ಅವರ ದೀರ್ಘಾವಧಿಯ ಪ್ರತಿಸ್ಪರ್ಧಿ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್‌ನ ಲಿಯೊನೆಲ್ ಮೆಸ್ಸಿ ಈ ಋತುವಿನಲ್ಲಿ 110 ಮಿಲಿಯ ಡಾಲರ್ (ಸುಮಾರು 811 ಕೋಟಿ ರೂಪಾಯಿ) ಗಳಿಸಲಿದ್ದಾರೆ. ಇದರಲ್ಲಿ 75 ಮಿಲಿಯ ಡಾಲರ್ (ಸುಮಾರು 553 ಕೋಟಿ ರೂಪಾಯಿ) ವೇತನ ಮತ್ತು ಬೋನಸ್‌ನಿಂದ ಬಂದರೆ ಸುಮಾರು 35 ಮಿಲಿಯ ಡಾಲರ್ (ಸುಮಾರು 258 ಕೋಟಿ ರೂಪಾಯಿ) ಜಾಹೀರಾತುಗಳಿಂದ ಬರಲಿದೆ ಎಂದು ಫೋರ್ಬ್ಸ್‌ನ ಹೊಸ ಪಟ್ಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News