ಪ್ರಧಾನಿ ಮೋದಿಯವರನ್ನು 'ಹೀರೋ' ಎಂದು ಹೊಗಳಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್

Update: 2021-09-24 15:36 GMT
Express Photo

ಲಂಡನ್: ಘೇಂಡಾಮೃಗಗಳ ರಕ್ಷಣೆಯ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವ ಭಾರತದ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಮತ್ತು ಪ್ರಾಣಿ ಸಂರಕ್ಷಕ ಕೆವಿನ್ ಪೀಟರ್ಸನ್ ಅವರು ಶ್ಲಾಘಿಸಿದ್ದಾರೆ.

ಈ ಕುರಿತಾಗಿ ಗುರುವಾರ ಟ್ವೀಟಿಸಿರುವ ಪೀಟರ್ಸನ್ ಅವರು ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದರು ಹಾಗೂ  ಅಸ್ಸಾಂ ಸರಕಾರವು ಒಂದು ಕೊಂಬಿನ ಖಡ್ಗಮೃಗವನ್ನು ಬೇಟೆಯಾಡದಂತೆ ರಕ್ಷಿಸುವ ಪ್ರಯತ್ನವನ್ನು ಶ್ಲಾಘಿಸಿದ ಭಾರತದ ಪ್ರಧಾನಿಯನ್ನು ಅನುಕರಿಸುವಂತೆ ವಿಶ್ವದ ಇತರ ನಾಯಕರನ್ನು ಒತ್ತಾಯಿಸಿದರು.

 "ಒಂದು ಕೊಂಬಿನ ಖಡ್ಗಮೃಗ ಭಾರತದ ಹೆಮ್ಮೆ ಹಾಗೂ  ಅದರ ಯೋಗಕ್ಷೇಮಕ್ಕಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಪ್ರಧಾನಿ ಹೇಳಿದ್ದರು.

ಪ್ರಧಾನಿ ಮೋದಿ ಅವರನ್ನು  'ಹೀರೋ' ಎಂದು ಕರೆದ ಕೆವಿನ್ ಪೀಟರ್ಸನ್, ಭಾರತದಲ್ಲಿ ಖಡ್ಗಮೃಗಗಳ ಸಂಖ್ಯೆ ವೇಗವಾಗಿ ಏರಿಕೆಯಾಗಲು 'ಇದೇ ಕಾರಣ' ಎಂದು ಹೇಳಿದರು.

ಪೀಟರ್ಸನ್ ಅವರು ಪಿಎಂ ಮೋದಿಯವರ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ, ಇದರಲ್ಲಿ ಅವರು "ಅಸ್ಸಾಂ ಸರಕಾರವು ಒಂದು ಕೊಂಬಿನ ಖಡ್ಗಮೃಗವನ್ನು ಬೇಟೆಯಾಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಂಡಿದೆ'' ಎಂದು ಪ್ರಶಂಸಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News