ಐಪಿಎಲ್: ಚೆನ್ನೈ ವಿರುದ್ಧ ಆರ್ ಸಿಬಿ 156/6

Update: 2021-09-24 16:05 GMT

ಶಾರ್ಜಾ: ಆರಂಭಿಕ ಬ್ಯಾಟ್ಸ್ ಮನ್ ಗಳಾದ ದೇವದತ್ತ ಪಡಿಕ್ಕಲ್(70, 50 ಎಸೆತ) ಹಾಗೂ ವಿರಾಟ್ ಕೊಹ್ಲಿ(53, 41 ಎಸೆತ)ಅರ್ಧಶತಕಗಳ ಕೊಡುಗೆಯ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಟೂರ್ನಿಯ 35ನೇ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.

ಟಾಸ್ ಜಯಿಸಿ ಚೆನ್ನೈ ನಾಯಕ ಧೋನಿ ಆರ್ ಸಿಬಿಯನ್ನು ಬ್ಯಾಟಿಂಗ್ ಗೆ ಇಳಿಸಿದರು. 13.2 ಓವರ್ ಗಳಲ್ಲಿ 111 ರನ್ ಕಲೆ ಹಾಕಿದ ದೇವದತ್ತ ಹಾಗೂ ಕೊಹ್ಲಿ ಆರ್ ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಆರ್ ಸಿಬಿ ತನ್ನ ಹಿಡಿತ ಕಳೆದುಕೊಂಡಿತು. ಎಬಿಡಿ ವಿಲಿಯರ್ಸ್(12), ಗ್ಲೆನ್ ಮ್ಯಾಕ್ಸ್ ವೆಲ್ (11), ಟಿಮ್ ಡೇವಿಡ್(1), ಹರ್ಷಲ್ ಪಟೇಲ್(3) ಬೇಗನೆ ಔಟಾದರು.

ಚೆನ್ನೈ ಪರ ಡ್ವೇಯ್ನ್ ಬ್ರಾವೊ(3-24)ಯಶಸ್ವಿ ಬೌಲರ್ ಎನಿಸಿಕೊಂಡಿದ್ದು, ಶಾರ್ದೂಲ್ ಠಾಕೂರ್(2-29) ಹಾಗೂ ದೀಪಕ್ ಚಹಾರ್(1-35) ಮೂರು ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News