ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ರ ಕಾಶ್ಮೀರ ಪ್ರಸ್ತಾವಕ್ಕೆ ಸ್ನೇಹಾ ದುಬೆ ಪ್ರಖರ ಉತ್ತರ

Update: 2021-09-25 18:13 GMT
photo: twitter

ವಿಶ್ವಸಂಸ್ಥೆ, ಸೆ. 25: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕಾಶ್ಮೀರದ ಕುರಿತ ಪಾಕಿಸ್ತಾನದ ಮುಖ್ಯಮಂತ್ರಿ ಇಮ್ರಾನ್ ಖಾನ್ ಅವರ ‘ಪ್ರಲಾಪ’ಕ್ಕೆ ಭಾರತದ ಯುವ ಪ್ರತಿನಿಧಿ ಸ್ನೇಹಾ ದುಬೆ ಸೂಕ್ತ ಪ್ರತ್ಯುತ್ತರ ನೀಡಿರುವುದು ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಕಾಶ್ಮೀರ ವಿವಾದವನ್ನು ಬಗೆ ಹರಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆಂದು ಇಮ್ರಾನ್ ಖಾನ್ ಅವರು ಅಧಿವೇಶನದ ಭಾಷಣದಲ್ಲಿ ಆಗ್ರಹಿಸಿದರು. ಇಂದು ಅಧಿವೇಶನದಲ್ಲಿ ಮಾತನಾಡಿದ ಸ್ನೇಹಾ ದುಬೆ ಅವರು ಇಮ್ರಾನ್‌ಖಾನ್‌ರ ಭಾಷಣವನ್ನು ತೀವ್ರವಾಗಿ ಖಂಡಿಸಿದರು. ನನ್ನ ದೇಶದ ಆಂತರಿಕ ವಿಚಾರವನ್ನು ಈ ಮಹಾನ್ ವೇದಿಕೆಯಲ್ಲಿ ಎಳೆದು ತರುವ ಮೂಲಕ ಹಾಗೂ ಸುಳ್ಳು ಕಕ್ಕುವ ಮೂಲಕ ವಿಶ್ವಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಪಾಕಿಸ್ತಾನದ ನಾಯಕರ ಮತ್ತೊಂದು ಪ್ರಯತ್ನಕ್ಕೆ ಪ್ರತ್ಯುತ್ತರ ನೀಡುವ ನಮ್ಮ ಹಕ್ಕನ್ನು ಚಲಾಯಿಸುತ್ತಿದ್ದೇನೆ ಎಂದು ದುಬೆ ಹೇಳಿದರು. ಇಂತಹ ಹೇಳಿಕೆಗಳು ನಮ್ಮ ಸಮಗ್ರ ಖಂಡನೆಗೆ ಅರ್ಹವಾಗಿವೆೆ. ಅಲ್ಲದೆ, ಪದೇ ಪದೆ ಸುಳ್ಳನ್ನು ಕಕ್ಕುತ್ತಿರುವ ವ್ಯಕ್ತಿಯ ಮನಸ್ಥಿತಿ ಬಗ್ಗೆ ಅನುಕಂಪ ಮೂಡುತ್ತದೆ. ತಾನು ವಿಷಯವನ್ನು ಸ್ಪಷ್ಟಪಡಿಸಲು ಈ ವೇದಿಕೆ ಬಳಸಿಕೊಳ್ಳುತ್ತಿದ್ದೇನೆ ಎಂದು ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶದಲ್ಲಿ ಮಾತನಾಡುತ್ತಾ ಹೇಳಿದರು.

ಜವಾಹರಲಾಲ್ ನೆಹರೂ ವಿವಿಯಲ್ಲಿ ಎಂಎ ಹಾಗೂ ಎಂಫಿಲ್ ಪಡೆದಿರುವ ದುಬೆ ಅವರು 2012ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News