ಐಪಿಎಲ್: ಕೆಕೆಆರ್ ವಿರುದ್ಧ ಚೆನ್ನೈ ಗೆಲುವಿನ ಕೇಕೆ

Update: 2021-09-26 14:08 GMT
photo: twitter.com/IPL

ಅಬುಧಾಬಿ, ಸೆ.26: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಋತುರಾಜ್ ಗಾಯಕ್ವಾಡ್(40, 28 ಎಸೆತ, 2 ಬೌಂಡರಿ, 3 ಸಿ.) ಹಾಗೂ ಪ್ಲೆಸಿಸ್(44, 30 ಎಸೆತ, 7 ಬೌಂಡರಿ)ಉತ್ತಮ ಆರಂಭದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧದ ಐಪಿಎಲ್ ಟೂರ್ನಿಯ 38ನೇ ಪಂದ್ಯದಲ್ಲಿ 2 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

 ರವಿವಾರ ನಡೆದ ಪಂದ್ಯದಲ್ಲಿ ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಇನಿಂಗ್ಸ್ ಆರಂಭಿಸಿದ ಗಾಯಕ್ವಾಡ್ ಹಾಗೂ ಪ್ಲೆಸಿಸ್ ಮೊದಲ ವಿಕೆಟ್‌ಗೆ 74 ರನ್ ಸೇರಿಸಿ ರನ್ ಚೇಸಿಂಗ್‌ಗೆ ಬಲ ನೀಡಿದರು. ಮೊಯಿನ್ ಅಲಿ(32), ರವೀಂದ್ರ ಜಡೇಜ(22) ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಧೋನಿ(1), ಅಂಬಟಿ ರಾಯುಡು(9), ಸ್ಯಾಮ್ ಕರ್ರನ್(4) ಹಾಗೂ ಸುರೇಶ್ ರೈನಾ(11)ನಿರಾಸೆಗೊಳಿಸಿದರು. ಕೆಕೆಆರ್ ಪರವಾಗಿ ಸ್ಪಿನ್ನರ್ ಸುನೀಲ್ ನರೇನ್(3-40)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು.

ಇದಕ್ಕೂ ಮೊದಲು ಅಗ್ರ ಕ್ರಮಾಂಕದ ಆಟಗಾರ ರಾಹುಲ್ ತ್ರಿಪಾಠಿ(45, 33 ಎಸೆತ,4 ಬೌಂಡರಿ, 1 ಸಿ.) ಹಾಗೂ ನಿತಿನ್ ರಾಣಾ(ಔಟಾಗದೆ 37, 27 ಎಸೆತ, 3 ಬೌಂಡರಿ, 1 ಸಿ.)ಅವರ ಸಾಂದರ್ಭಿಕ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 172 ರನ್ ಗುರಿ ನೀಡಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News