×
Ad

ಭಾರತದ ಹಾಕಿ ಸ್ಟ್ರೈಕರ್, ಕೊಡಗಿನ ಕುವರ ಎಸ್‌.ವಿ. ಸುನೀಲ್ ನಿವೃತ್ತಿ

Update: 2021-10-01 15:35 IST
photo: The indian express

ಹೊಸದಿಲ್ಲಿ: ಭಾರತದ ಹಿರಿಯ ಪುರುಷರ ಹಾಕಿ ತಂಡದ ಸ್ಟ್ರೈಕರ್, ಕೊಡಗಿನ ಕುವರ  ಎಸ್‌.ವಿ. ಸುನೀಲ್ ಶುಕ್ರವಾರ  ಅಂತರ್ ರಾಷ್ಟ್ರೀಯ  ಹಾಕಿಯಿಂದ ನಿವೃತ್ತಿಯನ್ನು ಘೋಷಿಸಿದರು. ಈ ಮೂಲಕ  14 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದರು, ಈ ಸಮಯದಲ್ಲಿ ಅವರು 2014 ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ತಂಡದ ಭಾಗವಾಗಿದ್ದರು.

ಭಾರತೀಯ ಪುರುಷರ ಹಾಕಿ ತಂಡದ ಐತಿಹಾಸಿಕ ಕಂಚಿನ ಪದಕ ವಿಜೇತ ಟೋಕಿಯೊ ಒಲಿಂಪಿಕ್ಸ್ ಅಭಿಯಾನದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಮತ್ತು ಡಿಫೆಂಡರ್ ಬೀರೇಂದ್ರ ಲಕ್ರಾ ಅವರು ತಮ್ಮ ಅಂತರ್ ರಾಷ್ಟ್ರೀಯ ನಿವೃತ್ತಿಯನ್ನು ಘೋಷಿಸಿದ ಒಂದು ದಿನದ ನಂತರ ಸುನೀಲ್ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

ಕೊಡಗಿನ  32 ವರ್ಷದ ಸುನೀಲ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ತಂಡದ ಭಾಗವಾಗಿರಲಿಲ್ಲ. ಕಿರಿಯ ಆಟಗಾರರಿಗೆ ದಾರಿ ಮಾಡಿಕೊಡಲು ಹಾಗೂ  ಭವಿಷ್ಯಕ್ಕಾಗಿ ವಿಜೇತ ತಂಡವನ್ನು ನಿರ್ಮಿಸಲು ಸಹಾಯ ಮಾಡಲು ಇದು ಸಮಯ ಎಂದು ಸುನೀಲ್ ಹೇಳಿದರು. ಹಿರಿಯ ಆಟಗಾರ ಭಾರತದ ಪರ 264 ಪಂದ್ಯಗಳಲ್ಲಿ ಕಾಣಿಸಿಕೊಂಡರು. 72 ಗೋಲುಗಳನ್ನು ಹೊಡೆದಿದ್ದಾರೆ.

"2024 ಪ್ಯಾರಿಸ್ ಒಲಿಂಪಿಕ್ಸ್ ಮೂರು ವರ್ಷಗಳು ದೂರವಿರುವಾಗ ಹಿರಿಯ ಆಟಗಾರನಾಗಿ ನಾನು ಯುವಕರಿಗೆ ದಾರಿ ಮಾಡಿಕೊಡುವುದು ಹಾಗೂ  ಭವಿಷ್ಯಕ್ಕಾಗಿ ವಿಜೇತ ತಂಡವನ್ನು ನಿರ್ಮಿಸುವಲ್ಲಿ ಸಹಾಯ ಮಾಡುವುದು ಮುಖ್ಯ" ಎಂದು ಅವರು ಹೇಳಿದರು.

ಕೊಡಗಿನ ಸೋಮವಾರಪೇಟೆಯ ಅರ್ಜುನ ಪ್ರಶಸ್ತಿ ವಿಜೇತ ಸುನೀಲ್  2007 ರಲ್ಲಿ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ  ವಿರುದ್ಧ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

ಅದರ ನಂತರ ವೇಗದ ಸ್ಟ್ರೈಕರ್‌ಗಾಗಿ ಅವರು ಹಿಂತಿರುಗಿ ನೋಡಲಿಲ್ಲ. ಎರಡು ಬಾರಿ ಒಲಿಂಪಿಯನ್ (2012 ಹಾಗೂ  2016) ಉತ್ತಮ ಪ್ರದರ್ಶನಗಳೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಫಾರ್ವರ್ಡ್ ಲೈನ್ ನಲ್ಲಿ ಪ್ರಮುಖ ಆಟಗಾರನಾಗಿ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News