×
Ad

ನೀರಜ್ ಚೋಪ್ರಾ ಚಿನ್ನ ಗೆದ್ದ ನಂತರ ಜಾವೆಲಿನ್ ತರಬೇತಿಗೆ ಬೇಡಿಕೆ ಹೆಚ್ಚಳ

Update: 2021-10-02 13:10 IST

ಹೊಸದಿಲ್ಲಿ: ಆಗಸ್ಟ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರು ಐತಿಹಾಸಿಕ ಚಿನ್ನದ ಸಾಧನೆಯ ಬಳಿಕ ತಳಮಟ್ಟದಲ್ಲಿ ಜಾವೆಲಿನ್ ಬೇಡಿಕೆ ತೀವ್ರ ಹೆಚ್ಚಳವಾಗಿದೆ.

ದಿಲ್ಲಿಯ ಛತ್ರಸಲ್ ಕ್ರೀಡಾಂಗಣದಂತಹ ಜನಪ್ರಿಯ ಕ್ರೀಡಾ ಅಕಾಡೆಮಿಗಳು ಹೊಸ ದಾಖಲಾತಿಗಳ ಗಡಿಬಿಡಿಯಲ್ಲಿವೆ.  ತರಬೇತುದಾರರ ಬಗ್ಗೆ ವಿಚಾರಿಸುವ ಪ್ರತಿ ದಿನ ಕನಿಷ್ಠ ಅರ್ಧ ಡಜನ್ ಟೆಸ್ಟ್ ಮೆಸೇಜ್ ಪಡೆಯುತ್ತಿದ್ದೇನೆ ಎಂದು ಒಲಿಂಪಿಯನ್ ಹೇಳುತ್ತಾರೆ ಹಾಗೂ  ಜಾವೆಲಿನ್ ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳ ವ್ಯವಹಾರವೂ ಹೆಚ್ಚಳವಾಗಿದೆ.

ಕಳೆದ ಎರಡು ತಿಂಗಳಲ್ಲಿ 40 ಹೊಸ ವಿದ್ಯಾರ್ಥಿಗಳು ಜಾವೆಲಿನ್ ಗೆ ದಾಖಲಾಗಿದ್ದಾರೆ. ಕೋಚ್ ಆಗಿ ನನ್ನ 12 ವರ್ಷಗಳಲ್ಲಿ ನಾನು ಈ ರೀತಿಯ ಆಸಕ್ತಿಯನ್ನು ನೋಡಿಲ್ಲ. ಒಲಿಂಪಿಕ್ಸ್ ನಂತರ ಕೆಲವು ಕಿರಿಯ ಓಟಗಾರರು ತಾವು  ಜಾವೆಲಿನ್ ಗೆ ಬದಲಾಯಿಸಬಹುದೇ ಎಂದು ನನ್ನನ್ನು ಕೇಳಿದರು. ನಾನು ಯುವ ಕ್ರೀಡಾಪಟುಗಳು ಹಾಗೂ  ಅವರ ಪೋಷಕರಿಂದ ಪ್ರತಿದಿನವೂ ಸಾಕಷ್ಟು ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ಅವರು  ಜಾವೆಲಿನ್ ಗೆ ಸೇರಿಕೊಳ್ಳಲು ಬಯಸುತ್ತಿದ್ದಾರೆ ಎಂದು ತರಬೇತುದಾರ ರಾಮನ್ ಜಾ ಹೇಳಿದ್ದಾರೆ.

ದಿಲ್ಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಕ್ಕಳಿಗೆ ತರಬೇತಿ ನೀಡುವ ಮಾಜಿ ರಾಷ್ಟ್ರೀಯ ಜಾವೆಲಿನ್ ಚಾಂಪಿಯನ್ ಸುನೀಲ್ ಗೋಸ್ವಾಮಿ 'ಜಾವೆಲಿನ್ ಕ್ರೇಜ್' ರಾಜಧಾನಿ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ಹೇಳುತ್ತಾರೆ.

"ನನ್ನ ಸ್ನೇಹಿತರು ದೇಶದಾದ್ಯಂತ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದು ನೀರಜ್ ಚಿನ್ನ ಗೆದ್ದ ನಂತರ ಎಲ್ಲರೂ ಜಾವೆಲಿನ್ ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಅವರು ನನಗೆ ಹೇಳುತ್ತಿದ್ದಾರೆ. ನಗರದ ಹೊರವಲಯದ ಮಕ್ಕಳು ಕ್ರೀಡಾಂಗಣಕ್ಕೆ ಬಂದು ನನಗೆ ತರಬೇತಿ ನೀಡಲು ವಿನಂತಿಸುತ್ತಾರೆ. ಟೆನಿಸ್ ಆಟಗಾರರು, ಓಟಗಾರರು ಹಾಗೂ  ಜಿಮ್ನಾಸ್ಟ್‌ಗಳು ನನ್ನ ಬಳಿಗೆ ಬಂದು ಅವರು ಜಾವೆಲಿನ್ ತೆಗೆದುಕೊಳ್ಳಲು ಬಯಸುತ್ತಾರೆ’’ ಎಂದು ಗೋಸ್ವಾಮಿ ಹೇಳುತ್ತಾರೆ.

ಕ್ರೀಡಾ ಸಲಕರಣೆ ತಯಾರಕರು ಕೂಡ  ಚೋಪ್ರಾ ಸೃಷ್ಟಿಸಿರುವ ಅಲೆಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಇಂದೋರ್ ಮೂಲದ ಕಂಪನಿಯಾದ ಆಮೆಂಟಮ್ ಸ್ಪೋರ್ಟ್ಸ್ ಆಗಸ್ಟ್ ನಿಂದ ಮಾರಾಟದಲ್ಲಿ 'ಕನಿಷ್ಠ ಮೂರು ಪಟ್ಟು ಹೆಚ್ಚಳ' ಕಂಡಿದೆ. ಅಮೆಂಟಮ್ ಜೊತೆಗಿನ ಪಾಲುದಾರ ಜಿತೇಂದರ್ ಸಿಂಗ್, 10,000 ರೂ.ಗಳ ವ್ಯಾಪ್ತಿಯಲ್ಲಿ ಬಜೆಟ್ ಜಾವೆಲಿನ್ ಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳುತ್ತಾರೆ.

"ಒಲಿಂಪಿಕ್ಸ್ ನಂತರ ಪರಿಸ್ಥಿತಿ ಬದಲಾಗಿದೆ. ನಮಗೆ ದೇಶದ ಎಲ್ಲೆಡೆಯಿಂದ ಕರೆಗಳು ಬರುತ್ತಿವೆ. ನಮ್ಮಲ್ಲಿ ಅತ್ಯಾಧುನಿಕ ಜಾವೆಲಿನ್‌ಗಳಿವೆ.  ಇದರ ಬೆಲೆ 1 ಲಕ್ಷಕ್ಕೂ ಹೆಚ್ಚು. ಆದರೆ ಈ ಸಮಯದಲ್ಲಿ ಬಜೆಟ್ ಜಾವೆಲಿನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅಗ್ಗದ ಮಾದರಿಗೆ ಮೊರೆ ಹೋಗಿದ್ದ ಕೆಲವು ಗ್ರಾಹಕರನ್ನು ನಾವು ಹೊಂದಿದ್ದೇವೆ''ಎಂದು ಸಿಂಗ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News