×
Ad

ನೀರಿನ ಅಡಿಯಲ್ಲೂ ಜಾವೆಲಿನ್ ಎಸೆತ ಅಭ್ಯಾಸ ಮಾಡಿದ ನೀರಜ್ ಚೋಪ್ರಾ!

Update: 2021-10-02 17:49 IST

ಹೊಸದಿಲ್ಲಿ: ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮೊದಲ ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದುಕೊಟ್ಟಿರುವ ನೀರಜ್ ಚೋಪ್ರಾ ನೀರೊಳಗಿರುವಾಗಲೂ ಜಾವೆಲಿನ್ ಬಗ್ಗೆ ಯೋಚಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯೊಂದು ಲಭಿಸಿದೆ. ಪ್ರಸ್ತುತ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿರುವ  ನೀರಜ್ ನೀರಿನಾಳದಲ್ಲಿ ಡೈವಿಂಗ್ ಮಾಡುತ್ತಿರುವ(ಸ್ಕೂಬಾ ಡೈವಿಂಗ್)ವೀಡಿಯೊವೊಂದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನೀರೊಳಗೆ ಜಾವಲಿನ್ ಥ್ರೋ ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ನೀರಿನೊಳಗೆ ಜಾವೆಲಿನ್ ಇರಲಿಲ್ಲ. ಜಾವೆಲಿನ್ ಎಸೆಯುವ ಹಾಗೆ ಅಭಿನಯಿಸಿ, ಗೆಲುವಿನ ಸಂಕೇತವನ್ನು ತೋರಿಸಿ ಎಲ್ಲರ ಮನ ಗೆದ್ದಿದ್ದಾರೆ. ಈ ವೇಳೆ ಹಿನ್ನೆಲೆಯಲ್ಲಿ ಎಆರ್ ರೆಹಮಾನ್ ಅವರ ವಂದೇ ಮಾತರಂ ಗೀತೆ ಕೇಳಿಬಂದಿದೆ.

 "ಆಕಾಶದಲ್ಲಿ, ಭೂಮಿಯಲ್ಲಿ ಇಲ್ಲವೆ ನೀರಿನೊಳಗೆ, ನಾನು ಯಾವಾಗಲೂ ಜಾವೆಲಿನ್ ಬಗ್ಗೆ ಯೋಚಿಸುತ್ತಿದ್ದೇನೆ!" ಎಂದು ಟ್ವೀಟಿಸಿದ್ದಾರೆ.

ನೀರಜ್ ನೀರೊಳಗಿನಿಂದ ಆನಂದಿಸುತ್ತಿರುವುದನ್ನು ಹಾಗೂ  ಜಾವಲಿನ್ ಎಸೆಯುವುದನ್ನು ಅನುಕರಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. 23 ವರ್ಷ ವಯಸ್ಸಿನ ನೀರಜ್  ತನ್ನ ಮಾಲ್ಡೀವ್ಸ್ ರಜಾದಿನದ ಒಂದೆರಡು ಛಾಯಾಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ತನ್ನ 'ಆರೋಗ್ಯಕರ ಉಪಹಾರವನ್ನು' ಆನಂದಿಸುತ್ತಿರುವುದನ್ನು ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News