ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದ ಐಶ್ವರಿ ಪ್ರತಾಪ್ ಸಿಂಗ್
Update: 2021-10-05 15:43 IST
ಲಿಮಾ: ಭಾರತದ ಯುವ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 50 ಮೀ. ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯನ್ನು ಮರಿದು ಚಿನ್ನ ಗೆದ್ದಸಾಧನೆ ಮಾಡಿದ್ದಾರೆ.
ತೋಮರ್ ಜೂನಿಯರ್ ವಿಶ್ವ ದಾಖಲೆಯ ಸ್ಕೋರ್ 1,185 ರ ಅರ್ಹತೆಯನ್ನು ಸರಿಗಟ್ಟಿದರು. ನಂತರ 463.4 ಸ್ಕೋರ್‌ನೊಂದಿಗೆ ಕಿರಿಯರ ವಿಶ್ವ ದಾಖಲೆಯನ್ನು ಮುರಿದರು.
456.5 ಸ್ಕೋರ್‌ನೊಂದಿಗೆ ಬೆಳ್ಳಿ ಗೆದ್ದ ಎರಡನೇ ಸ್ಥಾನದಲ್ಲಿರುವ ಫ್ರೆಂಚ್ ಆಟಗಾರ ಲ್ಯೂಕಾಸ್ ಕ್ರಿಝ್ಗಿಂತ ಸುಮಾರು ಏಳು ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದರು. ಅಮೆರಿಕದ ಗವಿನ್ ಬಾರ್ನಿಕ್(446.6 ಅಂಕ)ಕಂಚು ಜಯಿಸಿದರು.