ಐಪಿಎಲ್:ಆರ್ ಸಿಬಿಗೆ 141 ರನ್ ಸವಾಲು ನೀಡಿದ ಸನ್ ರೈಸರ್ಸ್
Update: 2021-10-06 21:29 IST
ಅಬುಧಾಬಿ: ಆರಂಭಿಕ ಬ್ಯಾಟ್ಸ್ ಮನ್ ಜೇಸನ್ ರಾಯ್(44, 38 ಎಸೆತ, 5 ಬೌಂಡರಿ), ನಾಯಕ ಕೇನ್ ವಿಲಿಯಮ್ಸನ್(31, 29 ಎಸೆತ, 4 ಬೌಂಡರಿ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ 142 ರನ್ ಗುರಿ ನೀಡಿದೆ.
ಬುಧವಾರ ನಡೆದ ಐಪಿಎಲ್ ಟೂರ್ನಿಯ 52ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 141 ರನ್ ಗಳಿಸಿದೆ.
ಆರ್ ಸಿಬಿ ಪರವಾಗಿ ಹರ್ಷಲ್ ಪಟೇಲ್(3-33)ಯಶಸ್ವಿ ಬೌಲರ್ ಎನಿಸಿಕೊಳ್ಳುವ ಮೂಲಕ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಡ್ಯಾನ್ ಕ್ರಿಸ್ಟಿಯನ್(2-14) ಎರಡು ವಿಕೆಟ್ ಪಡೆದರು.