ಐಪಿಎಲ್ ಕ್ವಾಲಿಫೈಯರ್-2: ಡೆಲ್ಲಿ ವಿರುದ್ದ ಕೋಲ್ಕತಾ ಬೌಲಿಂಗ್ ಆಯ್ಕೆ

Update: 2021-10-13 14:31 GMT
photo: twitter

ಶಾರ್ಜಾ: ಚೊಚ್ಚಲ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಫಾರ್ಮ್ ನಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಲಿಟ್ಮಸ್ ಟೆಸ್ಟ್ ಎದುರಿಸುತ್ತಿದ್ದು ಬುಧವಾರ ನಡೆದ ಐಪಿಎಲ್ ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿದೆ.

ಡೆಲ್ಲಿ 6 ಓವರ್ ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ ಮನ್ ಪೃಥ್ವಿ ಶಾ(18) ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್(ಔಟಾಗದೆ 17) ಹಾಗೂ ಮಾರ್ಕಸ್ ಸ್ಟೋನಿಸ್(3) ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಮೊದಲ ಕ್ವಾಲಿಫೈಯರ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಡವಿದ್ದ ಡೆಲ್ಲಿ ಫೈನಲ್ ತಲುಪುವ ಮೊದಲ ಅವಕಾಶವನ್ನು ಕಳೆದುಕೊಂಡಿತ್ತು.  ಭಾರತದ ವಿಕೆಟ್ ಕೀಪರ್ –ಬ್ಯಾಟ್ಸ್ ಮನ್ ರಿಷಭ್ ಪಂತ್ ನೇತೃತ್ವದ ಡೆಲ್ಲಿ ವಿರುದ್ಧ ಕೆಕೆಆರ್ ಮತ್ತೊಂದು ಸೋಲು ಕಂಡರೆ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ.

ಸೋಮವಾರ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎಲಿನೇಟರ್ ಸುತ್ತಿನಲ್ಲಿ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ರೋಚಕ ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News