ಕೀನ್ಯಾದ ವಿಶ್ವ ದಾಖಲೆ ಓಟಗಾರ್ತಿ ಆಗ್ನೆಸ್ ತಿರೋಪ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2021-10-14 17:14 GMT
photo: twitter

ನೈರೋಬಿ:  ಇತ್ತೀಚಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ್ದ ಕೀನ್ಯಾದ ದೂರ  ಅಂತರದ ಓಟಗಾರ್ತಿ ಆಗ್ನೆಸ್ ತಿರೊಪ್ ತನ್ನ 25 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ ಎಂದು ಅಥ್ಲೆಟಿಕ್ಸ್ ಕೀನ್ಯಾ (ಎಕೆ) ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತಿರೋಪ್ ಅವರು ಇರೋನ್ ನಲ್ಲಿರುವ ತನ್ನ ಮನೆಯಲ್ಲಿ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಪತಿ ನಾಪತ್ತೆಯಾಗಿದ್ದಾನೆ. ಆತನ ವಿಚಾರಣೆ ನಡೆಸಲು ಪೊಲೀಸರು ಬಯಸಿದ್ದಾರೆ ಎಂದು ತಿಳಿದುಬಂದಿದೆ.

ತಿರೋಪ್ ಅವರ ಪತಿ ಅಳುತ್ತಾ ಫೋನ್ ಮಾಡಿದ್ದಾರೆ ಹಾಗೂ ಅವರು ಮಾಡಿದ ಕೃತ್ಯಕ್ಕೆ ದೇವರ ಕ್ಷಮೆ ಕೇಳಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ  ನಂತರ ಅವರನ್ನು ಹುಡುಕುತ್ತಿದ್ದೇವೆ ಎಂದು ಎಲ್ಗೆಯೊ ಮರಕ್ವೆಟ್ ಕೌಂಟಿ ಪೊಲೀಸ್ ಮುಖ್ಯಸ್ಥ ಟಾಮ್ ಮಕೋರಿ  ಹೇಳಿದ್ದಾರೆ.

ತಿರೋಪ್ ಅವರು 2017 ಮತ್ತು 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 10,000 ಮೀಟರ್‌ ಓಟದಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ ಹಾಗೂ  ಟೋಕಿಯೊ ಕ್ರೀಡಾಕೂಟದಲ್ಲಿ 5,000 ಮೀ. ಓಟದಲ್ಲಿ 4ನೇ  ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News