ಐಪಿಎಲ್ ಫೈನಲ್: ಟಾಸ್ ಜಯಿಸಿದ ಕೋಲ್ಕತಾ ಮೊದಲು ಫೀಲ್ಡಿಂಗ್ ಆಯ್ಕೆ

Update: 2021-10-15 13:45 GMT
photo: twitter

ದುಬೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ಟಾಸ್ ಜಯಿಸಿದ ಇಯಾನ್ ಮೋರ್ಗನ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

ಅಂಕಿ-ಅಂಶದ ಪ್ರಕಾರ ದುಬೈ ಸ್ಟೇಡಿಯಂ ಪಿಚ್ ನಲ್ಲಿ ಮೊದಲು ಫೀಲ್ಡಿಂಗ್ ಮಾಡುವುದು  ಉತ್ತಮ ಆಯ್ಕೆ. ಈ ಸ್ಟೇಡಿಯಂನಲ್ಲಿ ನಡೆದ ಕಳೆದ 8 ಪಂದ್ಯಗಳಲ್ಲಿ ರನ್ ಚೇಸಿಂಗ್ ಮಾಡಿರುವ ತಂಡವೇ ಗೆಲುವು ಸಾಧಿಸಿದೆ. ಸೆ.19ರಂದು ಮೊದಲ ಪಂದ್ಯ ನಡೆದ ಬಳಿಕ  ಈ  ಪಿಚ್ ಅನ್ನು ಬಳಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News