ಐಪಿಎಲ್ ಫೈನಲ್: ಕೆಕೆ ಆರ್ ಗೆ 193 ರನ್ ಗುರಿ ನೀಡಿದ ಚೆನ್ನೈ ಕಿಂಗ್ಸ್

Update: 2021-10-15 15:58 GMT
photo: twitter

ದುಬೈ: ಆರಂಭಿಕ ಬ್ಯಾಟ್ಸ್ ಮನ್ ಎಫ್ ಡು ಪ್ಲೆಸಿಸ್ ಆಕರ್ಷಕ ಅರ್ಧಶತಕದ ಸಹಾಯದಿಂದ ಚೆನ್ನೈಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್ ಫೈನಲ್ ಪಂದ್ಯದ ಗೆಲುವಿಗೆ 193 ರನ್ ಗುರಿ ನೀಡಿದೆ.

ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದಿದ್ದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಪ್ಲೆಸಿಸ್ (86, 59 ಎಸೆತ, 7 ಬೌಂಡರಿ, 3 ಸಿ.)ಹಾಗೂ ಮೊಯಿನ್ ಅಲಿ(ಔಟಾಗದೆ 37, 20 ಎಸೆತ, 2 ಬೌಂಡರಿ, 3 ಸಿಕ್ಸರ್) ಮೂರನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಗಳಿಸಿ ಚೆನ್ನೈ ಉತ್ತಮ ಸ್ಕೋರ್ ಗಳಿಸಲು ನೆರವಾದರು.

ಇನಿಂಗ್ಸ್ ಆರಂಭಿಸಿದ ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್(32, 27  ಎಸೆತ, 3 ಬೌಂಡರಿ,1 ಸಿಕ್ಸರ್)ಮೊದಲ ವಿಕೆಟ್ ಗೆ 61 ರನ್ ಜೊತೆಯಾಟ ನಡೆಸಿದರು.

ರಾಬಿನ್ ಉತ್ತಪ್ಪ ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 31 ರನ್ ಗಳಿಸಿ ನರೇನ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಒಪ್ಪಿಸುವ ಮೊದಲು ಪ್ಲೆಸಿಸ್ ಅವರೊಂದಿಗೆ 2ನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು.

ಕೆಕೆಆರ್ ಪರವಾಗಿ ಸ್ಪಿನ್ನರ್ ಸುನೀಲ್ ನರೇನ್ (2-26) ಯಶಸ್ವಿ ಬೌಲರ್ ಎನಿಸಿಕೊಂಡರು. ವರುಣ್ ಚಕ್ರವರ್ತಿ ಇಂದು ದುಬಾರಿಯಾದರು(4 ಓವರ್, 38 ರನ್ ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News