ಸೌರಾಷ್ಟ್ರದ ಯುವ ಕ್ರಿಕೆಟಿಗ ಅವಿ ಬರೋಟ್ ಹೃದಯಾಘಾತದಿಂದ ನಿಧನ

Update: 2021-10-16 14:08 GMT
photo: twitter

ವಡೋದರ: ಸೌರಾಷ್ಟ್ರ ಬ್ಯಾಟ್ಸ್ ಮನ್  ಅವಿ ಬರೋಟ್ 29 ನೇ ವಯಸ್ಸಿನಲ್ಲಿ ಹೃದಯಾ ಘಾತದಿಂದ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ತಿಳಿಸಿದೆ.  

ಭಾರತದ 19 ವರ್ಷದೊಳಗಿನ ಮಾಜಿ ನಾಯಕ ಹಾಗೂ  2019-20ರ ಋತುವಿನಲ್ಲಿ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡದ ಸದಸ್ಯರಾಗಿದ್ದ ಬರೋಟ್  ತಮ್ಮ ವೃತ್ತಿಜೀವನದಲ್ಲಿ ಹರ್ಯಾಣ ಹಾಗೂ  ಗುಜರಾತ್ ಅನ್ನು ಪ್ರತಿನಿಧಿಸಿದ್ದರು.

 ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನಲ್ಲಿರುವ ಪ್ರತಿಯೊಬ್ಬರೂ  ಅವಿ ಬರೋಟ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಆಘಾತಗೊಂಡಿದ್ದಾರೆ. ಶುಕ್ರವಾರ ಸಂಜೆ ತೀವ್ರ ಹೃದಯಾಘಾತದಿಂದ ಅವರು ನಮ್ಮನ್ನು ಅಗಲಿದ್ದಾರೆ ಎಂದು ಅಸೋಸಿಯೇಶನ್ ರಾಜ್‌ಕೋಟ್‌ನಲ್ಲಿ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬರೋಟ್ ಅವರು ಬಲಗೈ ಬ್ಯಾಟರ್ ಆಗಿದ್ದರು, ಅವರು ಆಫ್-ಬ್ರೇಕ್‌ ಬೌಲಿಂಗ್  ಕೂಡ ಮಾಡಬಲ್ಲರು. ಬರೋಟ್ 38 ಪ್ರಥಮ ದರ್ಜೆ ಪಂದ್ಯಗಳು, 38 ಲಿಸ್ಟ್ ಎ ಪಂದ್ಯಗಳು ಹಾಗೂ  20 ದೇಶೀಯ ಟಿ 20 ಪಂದ್ಯಗಳನ್ನು ಆಡಿದ್ದಾರೆ.

ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆಗಿದ್ದರು ಮತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ 1,547 ರನ್, ಲಿಸ್ಟ್-ಎ ಪಂದ್ಯಗಳಲ್ಲಿ 1,030 ರನ್ ಹಾಗೂ  ಟಿ 20 ಯಲ್ಲಿ 717 ರನ್ ಗಳಿಸಿದ್ದರು.

ಬರೋಟ್ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ ತಂಡದ ಭಾಗವಾಗಿದ್ದರು. ಸೌರಾಷ್ಟ್ರ ತಂಡವು ಫೈನಲ್ ನಲ್ಲಿ ಬಂಗಾಳವನ್ನು ಸೋಲಿಸಿತು.

ಸೌರಾಷ್ಟ್ರಕ್ಕಾಗಿ ಅವರು 21 ರಣಜಿ ಟ್ರೋಫಿ ಪಂದ್ಯಗಳು, 17 ಎ ಲಿಸ್ಟ್ ಪಂದ್ಯಗಳು ಮತ್ತು 11 ದೇಶೀಯ ಟಿ 20 ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News