ಚೀನಾದ ಬಳಕೆದಾರರಿಗೆ ಕುರ್‌ ಆನ್ ಆ್ಯಪ್ ತೆಗೆದುಹಾಕಿದ ಆ್ಯಪಲ್‌

Update: 2021-10-16 17:13 GMT

ದುಬೈ, ಅ.16: ಚೀನಾದ ಅಧಿಕಾರಿಗಳ ಕೋರಿಕೆಯ ಹಿನ್ನೆಲೆಯಲ್ಲಿ ಆ್ಯಪ್ ಸ್ಟೋರ್ ನಿಂದ ಜನಪ್ರಿಯ ಕುರ್‌ ಆನ್ ಆ್ಯಪ್ ತೆಗೆದು ಹಾಕಿರುವುದಾಗಿ ಬಿಬಿಸಿ ವರದಿ ಮಾಡಿದೆ. ವಿಶ್ವದಾದ್ಯಂತ ಮಿಲಿಯಾಂತರ ಮುಸ್ಲಿಮರು ಬಳಸುತ್ತಿದ್ದ, ಓದುಗರ ಅಗತ್ಯಗಳಿಗೆ ಸೂಕ್ತವಾದ ಕುರ್‌ ಆನ್ ಮಜೀದ್ ಆ್ಯಪ್ನಲ್ಲಿ ಕಾನೂನುಬಾಹಿರ ಧಾರ್ಮಿಕ ಪಠ್ಯ ಒಳಗೊಂಡಿದೆ ಎಂದು ಚೀನಾದ ಅಧಿಕಾರಿಗಳು ಆಕ್ಷೇಪಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಸಿ ಹೇಳಿದೆ. 

ಚೀನಾದಲ್ಲಿ 1 ಮಿಲಿಯನ್ಗೂ ಅಧಿಕ ಮಂದಿ ಈ ಆ್ಯಪ್ ಬಳಸುತ್ತಿದ್ದಾರೆ. ಕುರ್‌ ಆನ್ ಮಜೀದ್ ಆ್ಯಪ್ನಲ್ಲಿ ಒಳಗೊಂಡಿರುವ ವಿಷಯಗಳು ಚೀನಾದ ಅಧಿಕಾರಿಗಳ ಹೆಚ್ಚುವರಿ ಪರಿಶೀಲನೆಗೆ ಒಳಪಡುವ ಅಗತ್ಯವಿರುವುದರಿಂದ ಅದನ್ನು ತೆಗೆದುಹಾಕಲಾಗಿದೆ. ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಚೀನಾದ ಸೈಬರ್ಸ್ಪೇಸ್ ಇಲಾಖೆ ಹಾಗೂ ಇತರ ಸಂಬಂಧಿತ ಪ್ರಾಧಿಕಾರದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಆ್ಯಪಲ್ ಸಂಸ್ಥೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. 

ಇಸ್ಲಾಮ್ ಅಧಿಕೃತ ಧರ್ಮ ಎಂದು ಚೀನಾದ ಕಮ್ಯುನಿಸ್ಟ್ ಪಕ್ಷ ಪರಿಗಣಿಸಿದ್ದರೂ, ಕ್ಸಿನ್ಜಿಯಾಂಗ್ ಪ್ರಾಂತ್ಯದ ಉಯಿಗರ್ ಮುಸ್ಲಿಮರ ಮಾನವ ಹಕ್ಕು ಉಲ್ಲಂಘನೆಯಂತಹ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಚೀನಾದ ವಿರುದ್ಧ ನಿರಂತರ ಆರೋಪ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News