ಸ್ಯಾಫ್ ಚಾಂಪಿಯನ್‌ಶಿಪ್ ಗೆಲುವಿನ ಶ್ರೇಯಸ್ಸು ಯುವಕರಿಗೆ ಸಮರ್ಪಿಸಿದ ಸುನೀಲ್ ಚೆಟ್ರಿ

Update: 2021-10-17 18:54 GMT

ಹೊಸದಿಲ್ಲಿ, ಅ.17: ಒಟ್ಟು ಐದು ಗೋಲುಗಳನ್ನು ಗಳಿಸುವ ಮೂಲಕ ಭಾರತವು 8ನೇ ಬಾರಿ ಸ್ಯಾಫ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರವಹಿಸಿರುವ ನಾಯಕ ಸುನೀಲ್ ಚೆಟ್ರಿ ತಂಡದ ಗೆಲುವಿನ ಶ್ರೇಯಸ್ಸನ್ನು ಯುವ ಆಟಗಾರರಿಗೆ ಸಮರ್ಪಿಸಿದ್ದಾರೆ.

37ರ ಹರೆಯದ ಚೆಟ್ರಿ ಕಳೆದ 10 ವರ್ಷಗಳಿಂದ ಭಾರತದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಶನಿವಾರ ನಡೆದ ನೇಪಾಳ ವಿರುದ್ಧದ ಫೈನಲ್ ಪಂದ್ಯದಲ್ಲಿ ತಂಡದ ಪರ ಮೊದಲ ಗೋಲು ಹಾಗೂ ವೈಯಕ್ತಿಕವಾಗಿ 80ನೇ ಗೋಲು ಗಳಿಸಿದ ಚೆಟ್ರಿ ಬ್ರೆಝಿಲ್ ದಂತಕತೆ ಪೀಲೆ ದಾಖಲೆಯನ್ನು ಮುರಿದರಲ್ಲದೆ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು. ಯುವಕರತ್ತ ನೋಡಿದರೆ ಎಲ್ಲರಿಗೂ ಉತ್ತಮ ಭಾವನೆ ಉಂಟಾಗುತ್ತದೆ.

ಯುವಕರ ಕಠಿಣ ಶ್ರಮದಿಂದ ಇದು ಸಾಧ್ಯವಾಗಿದೆ. ನಾವು ಒಟ್ಟು 20 ದಿನಗಳ ಕಾಲ ಮಾಲ್ಡೀವ್ಸ್‌ನಲ್ಲಿದ್ದೆವು. ನಾವು ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ(1-1) ಹಾಗೂ ಶ್ರೀಲಂಕಾ(0-0)ವಿರುದ್ಧ ಉತ್ತಮ ಪ್ರದರ್ಶನ ನೀಡದೆ ಟೀಕೆ ಎದುರಿಸಿದ ಕಾರಣ ಈ ಪ್ರಶಸ್ತಿ ವಿಶೇಷವಾಗಿದೆ ಎಂದು ಆಟಗಾರನಾಗಿ 3ನೇ ಬಾರಿ ಸ್ಯಾಫ್ ಚಾಂಪಿಯನ್ ಶಿಪ್ ಜಯಿಸಿರುವ ಚೆಟ್ರಿ ಹೇಳಿದ್ದಾರೆ. ಚೆಟ್ರಿ ಈ ಹಿಂದೆ 2011 ಹಾಗೂ 2015ರಲ್ಲಿ ಸ್ಯಾಫ್ ಚಾಂಪಿಯನ್‌ಶಿಪ್ ಗೆದ್ದ ತಂಡದ ಭಾಗವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News