ವಿಶ್ವಕಪ್: ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಸ್ಪಿನ್ ಮೋಡಿ, ವಿಂಡೀಸ್ ಗೆ ಸೋಲು

Update: 2021-10-23 16:39 GMT
photo:twiiter/@T20WorldCup

ದುಬೈ: ಇಂಗ್ಲೆಂಡ್ ನ ಆದಿಲ್ ರಶೀದ್ ಸ್ಪಿನ್ ಮೋಡಿಗೆ ತತ್ತರಿಸಿದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12 ಸುತ್ತಿನ ಗ್ರೂಪ್-1ರ ಪಂದ್ಯದಲ್ಲಿ ಇಂಗ್ಲೆಂಡ್ ನ ವಿರುದ್ಧ ಕೇವಲ 55 ರನ್ ಗೆ ಗಂಟುಮೂಟೆ ಕಟ್ಟಿ 6 ವಿಕೆಟ್ ಗಳ ಅಂತರದಿಂದ ಸೋಲುಂಡಿದೆ

ಶನಿವಾರ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ವಿಂಡೀಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ರಶೀದ್ (2.2 ಓವರ್ ಗಳಲ್ಲಿ 2 ರನ್ ಗೆ 4 ವಿಕೆಟ್ ) ನೇತೃತ್ವದ ಬೌಲಿಂಗ್ ದಾಳಿಗೆ ದಿಕ್ಕಾಪಾಲಾದ ವಿಂಡೀಸ್ 14.2 ಓವರ್ ಗಳಲ್ಲಿ 55 ರನ್ ಗೆ ಆಲೌಟಾಯಿತು. ರಶೀದ್ ಗೆ ಮೊಯಿನ್ ಅಲಿ (2-17) ಹಾಗೂ ಮಿಲ್ಸ್(2-17)ವಿಂಡೀಸ್ ಗೆ ಸಿಂಹಸ್ಚಪ್ನರಾದರು.

ವಿಂಡೀಸ್ ಪರವಾಗಿ ಕ್ರಿಸ್ ಗೇಲ್(13) ಎರಂಡಕೆಯ ಸ್ಕೋರ್ ಗಳಿಸಿದರು. ನಾಯಕ ಕಿರೊನ್ ಪೊಲಾರ್ಡ್ 6 ರನ್ , ಡ್ವೆಯ್ನ್ ಬ್ರಾವೊ 5, ಎವಿನ್ ಲೆವಿಸ್ 6, ಸಿಮ್ಮನ್ಸ್ 3 ರನ್ ಗಳಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ಇಂಗ್ಲೆಂಡ್ 8.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತು. ಔಟಾಗದೆ 24 ರನ್ ಗಳಿಸಿದ ಜೋಸ್ ಬಟ್ಲರ್ ಗೆಲುವನ್ನು ದೃಢಪಡಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News