ಇಂದು ಭಾರತ-ಪಾಕಿಸ್ತಾನ ಹಣಾಹಣಿ

Update: 2021-10-23 18:50 GMT
photo:cricketaddictor

ದುಬೈ, ಅ. 23: ಎಲ್ಲರೂ ಭಾರೀ ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯ ರವಿವಾರ ದುಬೈಯಲ್ಲಿ ನಡೆಯಲಿದೆ. ಸೂಪರ್ 12 ಹಂತದ ಈ ಪಂದ್ಯವು, ಯುಎಇ ಮತ್ತು ಒಮಾನ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ-20ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಮೊದಲ ಪಂದ್ಯವಾಗಿದೆ.

2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಆರಂಭ ಗೊಂಡಂ ದಿನಿಂದ ಪಾಕಿಸ್ತಾನ ವಿರುದ್ಧದ ಎಲ್ಲ 5 ಪಂದ್ಯಗಳನ್ನು ಗೆದ್ದಿರುವ ದಾಖಲೆಯನ್ನು ಭಾರತ ಹೊಂದಿದೆ. ಈ ಎಲ್ಲ ಪಂದ್ಯಗಳನ್ನು ಭಾರತವು ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ ಗೆದ್ದಿದೆ. ಈ ಬಾರಿ ಧೋನಿ ತಂಡದಲ್ಲಿಲ್ಲ ದಿದ್ದರೂ ಮಾರ್ಗದರ್ಶಕರಾಗಿ ನಾಯಕ ವಿರಾಟ್ ಕೊಹ್ಲಿಗೆ ತನ್ನ ಅನುಭವವನ್ನು ಧಾರೆಯೆರೆಯಲಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯಗಳನ್ನು ಎಲ್ಲರೂ ಬಯಸುತ್ತಾರೆ. ಉಪಖಂಡದ ಸಾಂಪ್ರದಾಯಿಕ ಬದ್ಧ ಎದುರಾಳಿಗಳ ನಡುವಿನ ಹೋರಾಟದ ರೋಮಾಂಚನಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಗಳನ್ನು ಎದುರು ನೋಡಿದರೆ, ತಮ್ಮ ತಿಜೋರಿಗಳನ್ನು ತುಂಬಿಸಿಕೊಳ್ಳುವುದಕ್ಕಾಗಿ ನೇರಪ್ರಸಾರದ ಟಿವಿ ಚಾನೆಲ್‌ಗಳು ಮತ್ತು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಪಂದ್ಯಗಳನ್ನು ಬಯಸುತ್ತಿವೆ. ಒಂದು ರೀತಿಯಲ್ಲಿ ಎಲ್ಲರೂ ಈ ಪಂದ್ಯಗಳ ವ್ಯಸನಿಗಳಾಗಿದ್ದಾರೆ. ಅಭಿಮಾನಿಗಳಿಗೆ ಇದು ಭಾವನಾತ್ಮಕ ವ್ಯಸನವಾದರೆ, ಇತರರಿಗೆ ಹಣ ಮಾಡಿಕೊಳ್ಳುವ ವ್ಯಸನ!

ಈ ಪಂದ್ಯದಲ್ಲಿ ಭಾರತದ ಅಟಗಾರರಿಗಿಂತಲೂಹೆಚ್ಚಿನ ಒತ್ತಡ ಪಾಕಿಸ್ತಾನದ ಆಟಗಾರರ ಮೇಲಿದೆ. ಅವರು ತಮ್ಮ ಸಾಮರ್ಥ್ಯಗಳನ್ನು ಸಾಧಿಸಿತೋರಿಸಬೇಕಿದೆ.

ಶಹೀನ್ ಶಾ ಅಫ್ರಿದಿ, ಮುಹಮ್ಮದ್ ರಿಝ್ವಿನ್, ಹಾರಿಸ್ ರವೂಫ್ ಮತ್ತು ನಾಯಕ ಬಾಬರ್ ಅಝಮ್ ಮುಂತಾದವರ ಮೇಲೆ ಭಾರತದ ವಿರುದ್ಧದ ಸೋಲಿನ ಸರಪಣಿಯನ್ನು ಮುರಿಯಬೇಕಾದ ಒತ್ತಡ ಸಹಜವಾಗಿಯೇ ಇದೆ. ಈ ಒತ್ತಡ ಭಾರತೀಯ ಆಟಗಾರರ ಮೇಲಿಲ್ಲ. ಯಾಕೆಂದರೆ ಪಾಕಿಸ್ತಾನ ವಿರುದ್ಧದ ಈವರೆಗಿನ ಎಲ್ಲ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳನ್ನು ಭಾರತವೇ ಗೆದ್ದಿದೆ.

ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಮತ್ತು ರಿಶಭ್ ಪಂತ್ ಭಾರತದ ಶಕ್ತಿಯಾಗಿದ್ದಾರೆ. ಅಫ್ರಿದಿ, ರವೂಫ್, ಹಸನ್, ಇಮಾದ್ ವಾಸಿಮ್ ಮತ್ತು ಶಹ್ದಾಬ್ ಖಾನ್ ಮುಂತಾದ ಪಾಕ್ ಬೌಲರ್‌ಗಳ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ.

ಅನುಭವಿ ಬೌಲರ್ ಭುವನೇಶ್ವರ ಕುಮಾರ್ ಹೆಚ್ಚಿನ ಪಾತ್ರ ವಹಿಸಬಹುದಾಗಿದೆ. ಅವರ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್‌ಗಿಂತಲೂ ಹೆಚ್ಚಿನ ವೈವಿಧ್ಯತೆಯಿದೆ.

ಪಾಕಿಸ್ತಾನಕ್ಕೆ ಎಲ್ಲ ಪ್ರಕಾರಗಳ ಆಟದಲ್ಲಿ ಸೂಪರ್ ಸ್ಟಾರ್‌ಆಗಿರುವ ನಾಯಕ ಬಾಬರ್ ಅವರೇ ಪ್ರಮುಖ ಶಕ್ತಿ. ಅವರಿಗೆ ಸಹಕಾರ ನೀಡುವವರು ಶಹೀನ್, ಹಸನ್ ಮತ್ತು ರವೂಫ್. ಎಡಗೈ ಸ್ಪಿನ್ನರ್ ಇಮಾದ್ ಯುಎಇಯಲ್ಲಿ ಶ್ರೇಷ್ಠ ದಾಖಲೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News