ತೈವಾನ್‌ ನಲ್ಲಿ ಭೂಕಂಪನ

Update: 2021-10-24 18:00 GMT
ಸಾಂದರ್ಭಿಕ ಚಿತ್ರ:PTI

ತೈಪೆ,ಅ.24: ಈಶಾನ್ಯ ತೈವಾನ್‌ ನಲ್ಲಿ ರವಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯಲ್ಲಿ ತೀವ್ರವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ ಯಾವುದೇ ಸಾವುನೋವು ಅಥವಾ ಆಸ್ಪಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಭೂಕಂಪವು ರಿಕ್ಟರ್ಮಾಪಕದಲ್ಲಿ 6.5ರಷ್ಟು ತೀವ್ರತೆಯನ್ನು ದಾಖಲಿಸಿದ್ದು, ಇದು ಈ ವರ್ಷದಲ್ಲಿ ತೈವಾನ್‌ ನಲ್ಲಿ ಸಂಭವಿಸಿರುವ ಅತಿ ದೊಡ್ಡ ಭೂಕಂಪನವೆಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ತಿಳಿಸಿದೆ.

ಮುಖ್ಯ ಕಂಪನದ ಬೆನ್ನಲ್ಲೇ 5.4 ರಿಕ್ಟರ್ ಮಾಪಕ ತೀವ್ರತೆಯ ಪಶ್ಚಾತ್ ಕಂಪನ ಸಂಭವಿಸಿದೆ. ಭೂಕಂಪನದ ಬೆನ್ನಲ್ಲೇ ತೈಪೆಯಲ್ಲಿನ ಮೆಟ್ರೋ ರೈಲು ಸಂಚಾರವನ್ನು ಒಂದು ತಾಸಿನ ವರೆಗೆ ಸ್ಥಗಿತಗೊಳಿಸಲಾಗಿತ್ತು. ಆನಂತರ ಮೆಟ್ರೋ ಸಂಚಾರ ಪುನಾರಂಭಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

1999ರ ಸೆಪ್ಟೆಂಬರ್ನಲ್ಲಿ ತೈವಾನ್‌ ನಲ್ಲಿ ಸಂಭವಿಸಿದ ಭೂಕಂಪದಲ್ಲಿ 2400 ಮಂದಿ ಸಾವನ್ನಪ್ಪಿದ್ದು, ಇದು ಈ ದ್ವೀಪರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಪ್ರಾಕೃತಿಕ ವಿಕೋಪವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News