ರೋಹಿತ್ ಶರ್ಮಾ ಕುರಿತ ಪತ್ರಕರ್ತರ ಪ್ರಶ್ನೆಗೆ ಅಚ್ಚರಿ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ

Update: 2021-10-25 08:34 GMT

ದುಬೈ: ಟ್ವೆಂಟಿ- 20 ವಿಶ್ವಕಪ್ ನಲ್ಲಿ ಭಾರತವು ತಾನಾಡಿದ ಮೊದಲ ಪಂದ್ಯದಲ್ಲೇ  ಪಾಕಿಸ್ತಾನದ ವಿರುದ್ಧ  10 ವಿಕೆಟ್ ಗಳಿಂದ ಸೋತ  ಬಳಿಕ  ನಡೆದ  ಪತ್ರಿಕಾಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಿಂದ ದಿಗ್ಭ್ರಮೆಗೊಂಡರು,

ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್  ಅವರು ರೋಹಿತ್ ಶರ್ಮಾ ಅವರ ಬದಲಿಗೆ  ಆಡಲಿದ್ದಾರೆಯೇ? ಎಂದು ಪತ್ರಕರ್ತರೊಬ್ಬರು ಕೇಳಿದರು.

ಈ ಪ್ರಶ್ನೆಯಿಂದ ಅಚ್ಚರಿಗೊಂಡ ಕೊಹ್ಲಿ ಪತ್ರಕರ್ತರನ್ನು ಕೇಳಿದರು, "ಇದು ತುಂಬಾ ಧೈರ್ಯಶಾಲಿ ಪ್ರಶ್ನೆ. ನೀವು ಏನು ಯೋಚಿಸುತ್ತೀರಿ ಸರ್?" ಎಂದರು.

ಕಿಶನ್ ಇಂಗ್ಲೆಂಡ್ ವಿರುದ್ಧದ ಭಾರತ ಆಡಿದ್ದ  ಅಭ್ಯಾಸ ಪಂದ್ಯದಲ್ಲಿ 46 ಎಸೆತಗಳಲ್ಲಿ 70 ರನ್ ಗಳಿಸಿದ್ದರು. ಆದರೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ರವಿವಾರದ ಸೂಪರ್ 12 ಪಂದ್ಯಕ್ಕಾಗಿ ಆಡುವ 11ರ ಬಳಗದಲ್ಲಿ ಇಶಾನ್ ಕಾಣಿಸಿಕೊಂಡಿರಲಿಲ್ಲ.

"ನಾನು ಅತ್ಯುತ್ತಮವೆಂದು ಭಾವಿಸಿದ ತಂಡವನ್ನು ಆಡಿದ್ದೇನೆ. ನಿಮ್ಮ ಅಭಿಪ್ರಾಯವೇನು?" ಎಂದು ಟೀಮ್ ಇಂಡಿಯಾ ನಾಯಕ ಮರು ಪ್ರಶ್ನಿಸಿದರು.

"ನೀವು ಟ್ವೆಂಟಿ- 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ರೋಹಿತ್ ಶರ್ಮಾ ಅವರನ್ನು ಹೊರಗಿಡುತ್ತೀರಾ? ನೀವು ರೋಹಿತ್ ಶರ್ಮಾ ಅವರನ್ನು ಕೈಬಿಡುತ್ತೀರಾ? ನಾವು ಆಡಿದ ಕೊನೆಯ ಪಂದ್ಯದಲ್ಲಿ ಅವರು ಏನು ಮಾಡಿದರು ಗೊತ್ತಾ? ಹೌದು? ನಂಬಲು ಸಾಧ್ಯವಿಲ್ಲ. ನಿಮಗೆ ವಿವಾದದ ವಿಷಯ ಬೇಕಾದರೆ ದಯವಿಟ್ಟು ಮೊದಲು ನನಗೆ ತಿಳಿಸಿ. ನಾನು ಅದಕ್ಕೆ ತಕ್ಕಂತೆ ಉತ್ತರಿಸುತ್ತೇನೆ "ಎಂದು ಕೊಹ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News