ಮುಂಬರುವ ಐಪಿಎಲ್ ಗೆ ಎರಡು ಹೊಸ ತಂಡಗಳ ಸೇರ್ಪಡೆ

Update: 2021-10-25 14:32 GMT

ಹೊಸದಿಲ್ಲಿ: ಮುಂಬರುವ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಎರಡು ಹೊಸ ತಂಡಗಳು ಸೋಮವಾರ ಸೇರ್ಪಡೆಯಾಗಿದ್ದು, ಇದರೊಂದಿಗೆ ಐಪಿಎಲ್ ನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಈ ಎರಡು ತಂಡಗಳ ಸೇರ್ಪಡೆಯೊಂದಿಗೆ ಮುಂಬರುವ 2022ರ ಐಪಿಎಲ್ ನಲ್ಲಿ ಒಟ್ಟು ತಂಡಗಳ ಸಂಖ್ಯೆ 10ಕ್ಕೇರಿಕೆಯಾಗಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಅಹಮದಾಬಾದ್ ಹಾಗೂ  ಲಕ್ನೋ ಐಪಿಎಲ್ ಲೀಗ್‌ಗೆ ಸೇರ್ಪಡೆಗೊಂಡ 2 ಹೊಸ ಫ್ರಾಂಚೈಸಿಗಳಾಗಿವೆ. ವರದಿಗಳ ಪ್ರಕಾರ ಖಾಸಗಿ ಇಕ್ವಿಟಿ ಮತ್ತು ಹೂಡಿಕೆ ಸಲಹಾ ಸಂಸ್ಥೆಯಾದ ಸಿವಿಸಿ ಕಂಪನಿಯು 5,200 ಕೋ.ರೂ. ಮೊತ್ತವನ್ನು ಬಿಡ್ ಮಾಡಿ ಅಹಮದಾಬಾದ್ ಫ್ರಾಂಚೈಸಿಯನ್ನು ಪಡೆದುಕೊಂಡಿದೆ.

ಸಂಜೀವ್ ಗೊಯೆಂಕಾ ಮಾಲಿಕತ್ವದ ಆರ್ ಪಿ ಎಸ್ ಜಿ ಸಮೂಹ  7,200 ಕೋಟಿ ಬಿಡ್ ಸಲ್ಲಿಸಿ ಲಕ್ನೋ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆ ಸೋಮವಾರ ದುಬೈನಲ್ಲಿ ನಡೆದಿದ್ದು, ಅತಿ ಹೆಚ್ಚು ಬಿಡ್ ಮಾಡಿದ ಇಬ್ಬರು ಫ್ರಾಂಚೈಸಿ ಹಕ್ಕುಗಳನ್ನು ಗೆದ್ದಿದ್ದಾರೆ.

ಅಹಮದಾಬಾದ್ ಹಾಗೂ  ಲಕ್ನೋ ಸೇರ್ಪಡೆಯೊಂದಿಗೆ ಮುಂದಿನ ವರ್ಷದಿಂದ ಐಪಿಎಲ್ 10 ತಂಡಗಳ ಟೂರ್ನಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News