×
Ad

"ಕ್ರಿಕೆಟ್ ಎಲ್ಲರನ್ನೂ ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು": ಶಮಿಯನ್ನು ಬೆಂಬಲಿಸಿ ಪಾಕ್ ಆಟಗಾರ ರಿಝ್ವಾನ್ ಟ್ವೀಟ್

Update: 2021-10-26 17:21 IST
Photo: Twitter/TRTworldnow

ಹೊಸದಿಲ್ಲಿ: ಭಾನುವಾರ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಟಿ-20 ವಿಶ್ವ ಕಪ್ ಪಂದ್ಯಾವಳಿಯಲ್ಲಿನ ಪಾಕಿಸ್ತಾನದ ವಿರುದ್ಧದ ಪಂದ್ಯಾಟದಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಅವರ ಮತೀಯ ಗುರುತನ್ನು ಹೀಯಾಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೊಳಗಾದ ಭಾರತೀಯ ಬೌಲರ್ ಮುಹಮ್ಮದ್ ಶಮಿ ಪರ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಮೊಹಮ್ಮದ್ ರಿಝ್ವಾನ್ ನಿಂತಿದ್ದಾರೆ. 

ಈ ಕುರಿತಂತೆ ರಿಝ್ವಾನ್ ಟ್ವೀಟ್ ಒಂದನ್ನೂ ಮಾಡಿದ್ದಾರೆ. "ತನ್ನ ದೇಶಕ್ಕಾಗಿ ಹಾಗೂ ದೇಶದ ಜನರಿಗಾಗಿ ಒಬ್ಬ ಆಟಗಾರ ಎದುರಿಸಬೇಕಾದ ಒತ್ತಡ, ಆತ ನಡೆಸಬೇಕಾದ ಹೋರಾಟ ಹಾಗೂ ತ್ಯಾಗ ಅಪರಿಮಿತ. ಮೊಹಮ್ಮದ್ ಶಮಿ ಅವರೊಬ್ಬ ತಾರೆ ಹಾಗೂ ಜಗತ್ತಿನ ಅತ್ಯುತ್ತಮ ಬೌಲರ್ ಗಳಲ್ಲೊಬ್ಬರು. ದಯವಿಟ್ಟು ನಿಮ್ಮ ತಾರೆಗಳನ್ನು ಗೌರವಿಸಿ. ಈ ಆಟ ಜನರನ್ನು ಒಗ್ಗೂಡಿಸಬೇಕೇ ಹೊರತು ಅವರನ್ನು ವಿಭಜಿಸಬಾರದು" ಎಂದು ರಿಝ್ವಾನ್ ಮಾರ್ಮಿಕವಾಗಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News