ವಿಶ್ವಕಪ್:ಆಂಗ್ಲರಿಗೆ ಸುಲಭ ತುತ್ತಾದ ಆಸ್ಟ್ರೇಲಿಯ
ದುಬೈ ಅ.30: ಕ್ರಿಸ್ ಜೋರ್ಡನ್( 3-17) ನೇತೃತ್ವದ ಶಿಸ್ತುಬದ್ಧ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಜವಾಬ್ದಾರಿಯುತ ಬ್ಯಾಟಿಂಗ್(ಔಟಾಗದೆ 71, 32 ಎಸೆತ)ಸಹಾಯದಿಂದ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಗ್ರೂಪ್-1ರ ಪಂದ್ಯದಲ್ಲಿ 8 ವಿಕೆಟ್ ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ.
ಶನಿವಾರ ನಡೆದ ಟೂರ್ನಿಯ 26ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯವು ನಿಗದಿತ 20 ಓವರ್ ಗಳಲ್ಲಿ 125 ರನ್ ಗಳಿಸಿ ಆಲೌಟಾಯಿತು. ವೇಗದ ಬೌಲರ್ ಜೋರ್ಡನ್ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಕ್ರಿಸ್ ವೋಕ್ಸ್(2-23) ಹಾಗೂ ಟೈಮಲ್ ಮಿಲ್ಸ್(2-45)ತಲಾ ಎರಡು ವಿಕೆಟ್ ಪಡೆದರು. ಲಿವಿಂಗ್ ಸ್ಟೋನ್(1-15) ಹಾಗೂ ರಶೀದ್ (1-19) ತಲಾ ಒಂದು ವಿಕೆಟ್ ಗಳನ್ನು ಪಡೆದರು.
ಆಸ್ಟ್ರೇಲಿಯದ ಪರವಾಗಿ ಆ್ಯರೊನ್ ಫಿಂಚ್(44, 49 ಎಸೆತ, 4 ಬೌಂ.) ಅಗ್ರ ಸ್ಕೋರರ್ ಎನಿಸಿಕೊಂಡರು.
ಇಂಗ್ಲೆಂಡ್ ಪರವಾಗಿ ಬಟ್ಲರ್ ಔಟಾಗದೆ (71 ರನ್,32 ಎಸೆತ, 5 ಬೌಂಡರಿ,5ಸಿಕ್ಸರ್) ಹಾಗೂ ಜೇಸನ್ ರಾಯ್(22)ಮೊದಲ ವಿಕೆಟ್ ನಲ್ಲಿ 66 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಜಾನಿ ಬೈರ್ ಸ್ಟೋವ್ ಔಟಾಗದೆ 16 ರನ್ ಗಳಿಸಿದರು.