ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ ಶಾಕಿಬ್ ಅಲ್ ಹಸನ್: ವರದಿ

Update: 2021-10-31 16:43 GMT
photo: twitter

ದುಬೈ, ಅ.31: ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ವಿಫಲವಾಗಿರುವ ಬಾಂಗ್ಲಾದೇಶದ ಸ್ಟಾರ್ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಈಗ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

34ರ ಹರೆಯದ ಶಾಕಿಬ್ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲವಾಗಿದ್ದು, ಕೇವಲ 2 ವಿಕೆಟ್ ಪಡೆದಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧ ಪಂದ್ಯದ ವೇಳೆ ಕಾಣಿಸಿಕೊಂಡಿರುವ ಮಂಡಿರಜ್ಜು ಗಾಯದಿಂದ ಶಾಕಿಬ್ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಎಂದು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ವರದಿ ಮಾಡಿದೆ.

ಶಾಕಿಬ್ ಅವರ ಗಾಯ ಗುಣಮುಖವಾಗಿಲ್ಲ. ಮುಂದಿನ ಎರಡು ಪಂದ್ಯಗಳಲ್ಲಿ ಅವರು ಆಡುವ ಸಾಧ್ಯತೆ ಇಲ್ಲ. ಶಾಕಿಬ್ ನಾಳೆ ಅಥವಾ ನಾಡಿದ್ದು ಟೀಮ್ ಹೊಟೇಲ್‌ನಿಂದ ನಿರ್ಗಮಿಸಲಿದ್ದಾರೆ. ಅವರು ತಮ್ಮ ಕುಟುಂಬದ ಜೊತೆಗೆ ಅಮೆರಿಕಕ್ಕೆ ತೆರಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

 ಬಾಂಗ್ಲಾದೇಶವು ಶುಕ್ರವಾರ ವೆಸ್ಟ್‌ಇಂಡೀಸ್ ವಿರುದ್ಧ 3 ರನ್‌ನಿಂದ ಸೋತಿರುವ ಪಂದ್ಯದಲ್ಲಿ ಶಾಕಿಬ್ ಗಾಯಗೊಂಡಿದ್ದರು.

ಬಾಂಗ್ಲಾದೇಶವು ನವೆಂಬರ್ 2ರಂದು ದಕ್ಷಿಣ ಆಫ್ರಿಕ ಹಾಗೂ ನವೆಂಬರ್ 4ರಂದು ಆಸ್ಟ್ರೇಲಿಯವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಸೂಪರ್-12ರ ಹಂತದಲ್ಲಿ ಈವರೆಗೆ ಆಡಿರುವ ಎಲ್ಲ 3 ಪಂದ್ಯಗಳನ್ನು ಸೋತಿರುವ ಬಾಂಗ್ಲಾದೇಶವು ಗ್ರೂಪ್-1ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News