ವಿಶ್ವಕಪ್ : ಕೊನೆಯ ಓವರ್ ನಲ್ಲಿ ಶತಕ ಪೂರೈಸಿದ ಬಟ್ಲರ್, ಶ್ರೀಲಂಕಾಕ್ಕೆ 164 ರನ್ ಗುರಿ

Update: 2021-11-01 16:02 GMT
photo: ICC

ಶಾರ್ಜಾ: ಆರಂಭಿಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಆಕರ್ಷಕ ಶತಕ(ಔಟಾಗದೆ 101, 67 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ನಾಯಕ ಇಯಾನ್ ಮೊರ್ಗನ್ 40 ರನ್ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ತಂಡಕ್ಕೆ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಪಂದ್ಯದ ಗೆಲುವಿಗೆ 164 ರನ್ ಗುರಿ ನೀಡಿದೆ.

ಇಂಗ್ಲೆಂಡ್ ಒಂದು ಹಂತದಲ್ಲಿ 35 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದರೂ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ. ಇಂಗ್ಲೆಂಡ್ ಕೊನೆಯ 10 ಓವರ್ ಗಳಲ್ಲಿ 116 ರನ್ ಗಳಿಸಿ ಸ್ಕೋರನ್ನು 163ಕ್ಕೆ ತಲುಪಿಸಿತು.

19ನೇ ಓವರ್ ಅಂತ್ಯಕ್ಕೆ 87 ರನ್ ಗಳಿಸಿದ್ದ ಬಟ್ಲರ್ ದುಷ್ಮಂತ ಚಾಮೀರಾ ಬೌಲಿಂಗ್ ನ ಅಂತಿಮ ಎಸೆತವನ್ನು  ಸಿಕ್ಸರ್ ಗೆ ಅಟ್ಟುವ ಮೂಲಕ ಚೊಚ್ಚಲ ಟ್ವೆಂಟಿ-20 ಶತಕ ಪೂರೈಸಿದರು. 20ನೆ ಓವರ್ ನಲ್ಲಿ ಒಟ್ಟು 14 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News