ಕೋವಿಡ್ ಭೀತಿ ಇನ್ನೂ ದೂರವಾಗಿಲ್ಲ: ಬ್ರಿಟನ್ ಎಚ್ಚರಿಕೆ

Update: 2021-11-03 17:12 GMT
ಸಾಂದರ್ಭಿಕ ಚಿತ್ರ

ಲಂಡನ್,ನ.3:ಕೋವಿಡ್19 ಸಾಂಕ್ರಾಮಿಕವು ಇನ್ನೂ ಮುಗಿದಿಲ್ಲವಾದ ಕಾರಣ ಈ ಸಲವೂ ಕ್ರಿಸ್‌ಮಸ್ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದು ಕಷ್ಟಕರವಾಗಲಿದೆ ಎಂದು ಬ್ರಿಟನ್‌ನ ಉಪಮುಖ್ಯ ವೈದ್ಯಾಧಿಕಾರಿ ಬುಧವಾರ ಎಚ್ಚರಿಕೆ ನೀಡಿದ್ದಾರೆ ಹಾಗೂ ಜನರು ಸೋಂಕಿನ ತಡೆಗೆ ಎಚ್ಚರಿಕೆಯಿಂದ ವರ್ತಿಸುವಂತೆ ಹಾಗೂ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ಪಡೆಯುವಂತೆ ಕರೆ ನೀಡಿದ್ದಾರೆ.

ಮಂಗಳವಾರ ಬ್ರಿಟನ್‌ನಲ್ಲಿ ಕೋವಿಡ್‌ನಿಂದ 293 ಮಂದಿ ಸಾವನ್ನಪ್ಪಿದ್ದು, ಮಾರ್ಚ್ ತಿಂಗಳ ಬಳಿಕ ಇದು ಒಂದು ದಿನದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ. ಇತ್ತೀಚಿನ ವಾರಗಳಲ್ಲಿ ಬ್ರಿಟನ್‌ನಲ್ಲಿ ಸರಾಸರಿ 40 ಸಾವಿರ ಹೊಸ ಕೋವಿಡ್19 ಪ್ರಕರಣಗಳು ವರದಿಯಾಗುತ್ತಿವೆ.

ಪ್ರಧಾನಿ ಬೋರಿಸ್‌ ಜಾನ್ಸನ್ ಅವರು ಜುಲೈನಲ್ಲಿ ಕೋವಿಡ್19 ನಿರ್ಬಂಧಗಳನ್ನು ರದ್ದುಪಡಿಸಿದ್ದರು. ಸಾರ್ವಜನಿಕರಿಗೆ ಮಾಸ್ಕ್‌ಗನ್ನು ಕಡ್ಡಾಯಗೊಳಿಸುವ ಅಥವಾ ಲಾಕ್‌ಡೌನ್ ಹೇರುವ ಬದಲಿಗೆ ಲಸಿಕೆಗಳನ್ನು ನೀಡಿಕೆ ಅಭಿಯಾನವನ್ನು ತೀವ್ರಗೊಳಿಸುವ ಯೋಜನೆಯನ್ನು ತನ್ನ ಸರಕಾರ ಹೊಂದಿರುವುದಾಗಿ ಅವರು ತಿಳಿಸಿದ್ದರು.

ಬ್ರಿಟನ್‌ನಲ್ಲಿ ಬೂಸ್ಟರ್ ಡೋಸ್‌ಗಳ ನೀಡಿಕೆಯು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದಾಗಿ ಹಲವಾರು ದುರ್ಬಲ ದೇಹಾರೋಗ್ಯದವರಲ್ಲಿ ಸೋಂಕು ನಿರೋಧಕ ಸಾಮರ್ಥ್ಯವು ಕ್ಷೀಣಿಸುವ ಸಾಧ್ಯತೆಯಿದೆ ಎಂದು ಬ್ರಿಟನ್‌ನ ತುರ್ತು ಸ್ಥಿತಿಗಳಿಗಾಗಿನ ವೈಜ್ಞಾನಿಕ ಸಲಹಾ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News