5ರಿಂದ 11 ವರ್ಷದ ಮಕ್ಕಳಿಗೆ ಕೋವಿಡ್19 ಲಸಿಕೆಗೆ ಅಮೆರಿಕ ಅಂತಿಮ ಅನುಮೋದನೆ

Update: 2021-11-03 17:16 GMT

ವಾಶಿಂಗ್ಟನ್,ನ.3: 5ರಿಂದ 11 ವರ್ಷದೊಳಗಿನ ಮಕ್ಕಳಿಗಾಗಿ ಫೈಝರ್ ಹಾಗೂ ಬಯೋನ್‌ಟೆಕ್ ಸಂಸ್ಥೆ ಸಿದ್ಧಪಡಿಸಿರುವ ಲಸಿಕೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ಮಂಗಳವಾರ ಹಸಿರು ನಿಶಾನೆ ತೋರಿಸಿದ್ದಾರೆ. ಇದರೊಂದಿಗೆ ಅಮೆರಿಕವು ಕೋವಿಡ್18 ಲಸಿಕೆ ನೀಡಿಕೆ ಅಭಿಯಾನವನ್ನು 5 ವರ್ಷದವರೆಗಿನ ಮಕ್ಕಳಿಗೂ ವಿಸ್ತರಿಸಿದಂತಾಗಿದೆ.

ಅಮೆರಿಕದ ಆಹಾರ ಹಾಗೂ ಔಷಧಿ ಆಡಳಿತಸಂಸ್ಥೆ (ಎಫ್‌ಡಿಎ)ಯು ಈಗಾಗಲೇ 5ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆಗೆ ಅನುಮೋದನೆ ನೀಡಿತ್ತು. ಆದರೆ ಕೇಂದ್ರ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರವು (ಸಿಡಿಸಿ) ಈಗ ಔಪಚಾರಿಕವಾಗಿ ಈ ವಯೋಮಾನದ ಮಕ್ಕಳ ಲಸಿಕೀಕರಣಕ್ಕೆ ತನ್ನ ಅನುಮೋದನೆ ನೀಡಿದೆ.

5ರಿಂದ 11 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಲಸಿಕೆಯ ಪ್ರಮಾಣವು ಹದಿಹರೆಯದವರು ಹಾಗೂ ವಯಸ್ಕರಿಗೆ ನೀಡುವ ಲಸಿಕೆಯ ಪ್ರಮಾಣದ ಮೂರನೆ ಒಂದರಷ್ಟಿದೆ. ಅಮೆರಿಕದಲ್ಲಿರುವ ಈ ವಯೋಮಾನ ದ 2.80 ಕೋಟಿ ಮಕ್ಕಳಿಗೆ ಫೈಝರ್ -ಬಯೋನ್‌ಟೆಕ್ ಸಿದ್ಧಪಡಿಸಿರುವ ಲಸಿಕೆಯನ್ನು ನೀಡಲು ಸಿಡಿಸಿಯು ಅವಿರೋಧವಾಗಿ ನಿರ್ಧರಿಸಿದೆ ಎಂದು ಇಲಾಖೆಯ ನಿರ್ದೇಶಕಿ ಡಾ. ರೊಶೆಲ್ ವಾಲೆನ್ಸ್‌ಕಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News