ಜರ್ಮನಿಯಲ್ಲಿ ಕೊರೋನ ಉಲ್ಬಣ
Update: 2021-11-03 23:27 IST
ಬರ್ಲಿನ್,ನ.3: ಜರ್ಮನಿಯಲ್ಲಿ ಲಸಿಕೆ ಪಡೆಯದವರು ಕೊರೋನ ಸೋಂಕಿಗೆ ಒಳಗಾಗುವ ಪ್ರಕರಣಗಳಲ್ಲಿ ಒಂದೇ ಸವನೆ ಏರಿಕೆಯಾಗುತ್ತಿದೆಯೆಂದು ಆರೋಗ್ಯ ಸಚಿವ ಜೆನ್ಸ್ ಸ್ಪಾಹ್ನ್ ಬುಧವಾರ ತಿಳಿಸಿದ್ದಾರೆ. ಕೋವಿಡ್ ಪ್ರಕರಣಗಳ ಉಲ್ಬಣಿಸುವುದಕ್ಕೆ ಅಂಕುಶ ಹಾಕಬೇಕಾದರೆ ಕಠಿಣ ನಿರ್ಬಂಧಗಳನ್ನು ವಿದಿಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
‘‘ ಲಸಿಕೆ ಪಡೆಯದವರ ಸೋಂಕಿಗೆ ತುತ್ತಾಗುವುದನ್ನು ನಾವು ಕಾಣುತ್ತಿದ್ದೇವೆ ಹಾಗೂ ಅಗಾಧ ಪ್ರಮಾಣದಲ್ಲಿದೆ ಎಂದು ಸ್ಪಾಹ್ನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜರ್ಮನಿಯ ಕೆಲವು ಪ್ರಾಂತಗಳಲ್ಲಿ ತೀವ್ರ ನಿಗಾ ಘಟಕದ ಆಸ್ಪತ್ರೆಗಳಲ್ಲಿ ಕೊರತೆಯುಂಟಾಗಿದೆ’’ ಎಂದವರು ಹೇಳಿದ್ದಾರೆ.