×
Ad

ಟಿ-ಟ್ವೆಂಟಿ ಕ್ರಿಕೆಟ್‌ ವಿಶ್ವಕಪ್‌ ಬಳಿಕ ನಿವೃತ್ತಿ: ವೆಸ್ಟ್‌ ಇಂಡೀಸ್‌ ಆಟಗಾರ ಡ್ವೇನ್‌ ಬ್ರಾವೊ

Update: 2021-11-05 12:10 IST
Photo: Twitter

ದುಬೈ: ಟಿ-ಟ್ವೆಂಟಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾಕೂಟದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಕೊನೆಯ ಪಂದ್ಯವನ್ನು ಆಡಿದ ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಹೊಂದುವುದಾಗಿ ವೆಸ್ಟ್‌ ಇಂಡೀಸ್‌ ನ ಖ್ಯಾತ ಆಲ್‌ ರೌಂಡರ್‌ ಡ್ವೇನ್‌ ಬ್ರಾವೊ ಘೋಷಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಸೋತ ನಂತರ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ.

"ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ" ಎಂದು 38 ವರ್ಷದ ಬ್ರಾವೋ ಫೇಸ್‌ಬುಕ್‌ನಲ್ಲಿ ಐಸಿಸಿಯ ಪಂದ್ಯದ ನಂತರದ ಮಾತುಕತೆಯಲ್ಲಿ ಹೇಳಿದರು. "ನಾನು ಉತ್ತಮ ವೃತ್ತಿಜೀವನವನ್ನು ಹೊಂದಿದ್ದೇನೆ. ಕೆಲವು ಏರಿಳಿತಗಳನ್ನು ಹೊಂದಿದ್ದೆ, ಆದರೆ ನಾನು ಅದನ್ನು ಹಿಂತಿರುಗಿ ನೋಡಿದಾಗ, ಈ ಪ್ರದೇಶವನ್ನು ಮತ್ತು ಕೆರಿಬಿಯನ್ ಜನರನ್ನು ದೀರ್ಘಕಾಲ ಪ್ರತಿನಿಧಿಸಲು ನಾನು ತುಂಬಾ ಕೃತಜ್ಞನಾಗಿದ್ದೇನೆ." ಎಂದು ಹೇಳಿದ್ದಾರೆ.

ಬ್ರಾವೋ 2006 ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ ನಂತರ ವೆಸ್ಟ್ ಇಂಡೀಸ್‌ಗಾಗಿ 90 T20 ಪಂದ್ಯಾಟಗಳಲ್ಲಿ ಆಡಿದರು. ಅವರು 22.23 ರ ಸರಾಸರಿಯಲ್ಲಿ ಮತ್ತು 115.38 ರ ಸ್ಟ್ರೈಕ್ ರೇಟ್‌ನಲ್ಲಿ 1,245 ರನ್ ಗಳಿಸಿದ್ದಾರೆ. ೭೮ ವಿಕೆಟ್‌ ಗಳನ್ನೂ ಪಡೆದಿದ್ದಾರೆ. ಬ್ರಾವೊ 2012 ಮತ್ತು 2016ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News