'ಬ್ಲೂ ಒರಿಜಿನ್' ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿದ್ದ ಅಮೆರಿಕದ ಉದ್ಯಮಿ ವಿಮಾನ ಅಪಘಾತದಲ್ಲಿ ಮೃತ್ಯು

Update: 2021-11-13 06:37 GMT
ಗ್ಲೆನ್ ಡಿ ವ್ರೈಸ್ (Photo: twitter)

ನ್ಯೂಯಾರ್ಕ್: ಜೆಫ್ ಬೆಝೋಸ್ ಅವರ ಬ್ಲೂ ಒರಿಜಿನ್ ನಿರ್ವಹಿಸುವ ರಾಕೆಟ್‌ಶಿಪ್‌ನಲ್ಲಿ ನಟ ವಿಲಿಯಂ ಶಾಟ್ನರ್ ಅವರೊಂದಿಗೆ ಕಳೆದ ತಿಂಗಳು ಬಾಹ್ಯಾಕಾಶಕ್ಕೆ ಹಾರಿದ್ದ ಮೆಡಿಕಲ್ ಸಂಶೋಧನಾ ಉದ್ಯಮಿ ಗ್ಲೆನ್ ಡಿ ವ್ರೈಸ್ ನ್ಯೂಜೆರ್ಸಿಯಲ್ಲಿ ಸಣ್ಣ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ನ್ಯೂಯಾರ್ಕ್ ನಗರದ ವಾಯುವ್ಯದಲ್ಲಿರುವ ನ್ಯೂಜೆರ್ಸಿಯ ಸಸೆಕ್ಸ್ ಕೌಂಟಿಯಲ್ಲಿ ಗುರುವಾರ ವಿಮಾನ ಅಪಘಾತಕ್ಕೀಡಾಯಿತು. 49ರ ವಯಸ್ಸಿನ ಡಿ ವ್ರೈಸ್, ಹಾಗೂ  ವಿಮಾನದಲ್ಲಿದ್ದ ಇನ್ನೊಬ್ಬ ವ್ಯಕ್ತಿ, ಥಾಮಸ್ ಫಿಶರ್( 54ವರ್ಷ) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

"ಗ್ಲೆನ್ ಡಿ ವ್ರೈಸ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ನಾವು ಆಘಾತಗೊಂಡಿದ್ದೇವೆ. ಅವರು ಇಡೀ ಬ್ಲೂ ಒರಿಜಿನ್ ತಂಡಕ್ಕೆ ಹಾಗೂ  ಅವರ ಸಹ ಸಿಬ್ಬಂದಿಗೆ ತುಂಬಾ ಜೀವನ ಮತ್ತು ಶಕ್ತಿಯನ್ನು ನೀಡಿದ್ದರು" ಎಂದು ಬ್ಲೂ ಒರಿಜಿನ್ ಟ್ವಿಟರ್‌ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News