ಭಾರತ ವಿರುದ್ಧ ಟ್ವೆಂಟಿ-20ಸರಣಿಯಿಂದ ಹೊರಗುಳಿದ ಕೇನ್ ವಿಲಿಯಮ್ಸನ್

Update: 2021-11-16 06:06 GMT

ವೆಲ್ಲಿಂಗ್ಟನ್: ಕಾನ್ಪುರದಲ್ಲಿ ನವೆಂಬರ್ 25 ರಂದು ಆರಂಭವಾಗುವ ಮುಂದಿನ ಟೆಸ್ಟ್ ಸರಣಿಯ ಮೇಲೆ ಕೇಂದ್ರೀಕರಿಸಲು ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಟ್ವೆಂಟಿ 20 ಅಂತರರಾಷ್ಟ್ರೀಯ ಸರಣಿಯಿಂದ ದೂರ ಉಳಿಯಲಿದ್ದಾರೆ.

 ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ನವೆಂಬರ್ 17 ರಂದು ನಡೆಯಲಿರುವ ಆರಂಭಿಕ ಟ್ವೆಂಟಿ-20 ಪಂದ್ಯಕ್ಕೆ ವೇಗದ ಬೌಲರ್ ಟಿಮ್ ಸೌಥಿ ಅವರನ್ನು ನಾಯಕನಾಗಿ ನೇಮಿಸುವುದರೊಂದಿಗೆ ನ್ಯೂಝಿಲ್ಯಾಂಡ್  ಕ್ರಿಕೆಟ್ ಮಂಡಳಿಯು ಸೋಮವಾರ ಭಾರತ ವಿರುದ್ಧದ ಸರಣಿಗಾಗಿ ಟಿ20 ತಂಡವನ್ನು ಪ್ರಕಟಿಸಿತು.

"ನವೆಂಬರ್ 25 ರಂದು ಕಾನ್ಪುರದಲ್ಲಿ ಆರಂಭವಾಗುವ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿರುವ ಕಾರಣ ಬ್ಲ್ಯಾಕ್‌ಕ್ಯಾಪ್ಸ್ ನಾಯಕ ಕೇನ್ ವಿಲಿಯಮ್ಸನ್ ಈ ವಾರದ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯನ್ನು ಕಳೆದುಕೊಳ್ಳಲಿದ್ದಾರೆ" ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್  ಹೇಳಿಕೆಯಲ್ಲಿ ತಿಳಿಸಿದೆ.

"ಬುಧವಾರ ಸಂಜೆ ಟಿ 20 ಸರಣಿಯ ಆರಂಭಿಕ ಪಂದ್ಯದೊಂದಿಗೆ, ಶುಕ್ರವಾರ ಹಾಗೂ ರವಿವಾರ ರಾತ್ರಿ ಪಂದ್ಯಗಳು ನಡೆಯಲಿವೆ.  ವಿಲಿಯಮ್ಸನ್ ಅವರು ಈಗಾಗಲೇ ಜೈಪುರದಲ್ಲಿ ತರಬೇತಿ ಪಡೆಯುತ್ತಿರುವ ಟೆಸ್ಟ್ ಸ್ಪೆಷಲಿಸ್ಟ್ ಗ್ರೂಪ್‌ಗೆ ಸೇರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News