2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ:14 ಆತಿಥೇಯ ದೇಶಗಳನ್ನು ದೃಢಪಡಿಸಿದ ಐಸಿಸಿ

Update: 2021-11-16 16:54 GMT

ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ 2024 ರಿಂದ 2031 ತನಕ  ಐಸಿಸಿ ಪುರುಷರ ವೈಟ್-ಬಾಲ್ ಸ್ಪರ್ಧೆಗಳ 14 ಆತಿಥೇಯ ದೇಶಗಳನ್ನು ದೃಢಪಡಿಸಿದೆ.

ಚಾಂಪಿಯನ್ಸ್ ಟ್ರೋಫಿ ಹಿಂತಿರುಗಿದ್ದು ಪಾಕಿಸ್ತಾನವು 2025 ರಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ಎರಡು ಐಸಿಸಿ  ಪುರುಷರ ಕ್ರಿಕೆಟ್ ವಿಶ್ವಕಪ್‌ಗಳು,ನಾಲ್ಕು ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಳು ಹಾಗೂ ಎರಡು ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಈವೆಂಟ್‌ಗಳನ್ನು ಆಯೋಜಿಸಲು 11 ಪೂರ್ಣ ಸದಸ್ಯರು ಹಾಗೂ  ಮೂರು ಅಸೋಸಿಯೇಟ್ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗಿದೆ.

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನವನ್ನು ಆತಿಥೇಯ ಎಂದು ಹೆಸರಿಸಲಾಗಿದೆ ಎಂದು ಪಿಸಿಬಿ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಇದು 1996 ರ ನಂತರ ಪಾಕಿಸ್ತಾನದಲ್ಲಿ ಆಡಲಿರುವ ಮೊದಲ ಜಾಗತಿಕ ಕ್ರಿಕೆಟ್ ಪಂದ್ಯಾವಳಿಯಾಗಲಿದೆ.

ಅಮೆರಿಕ ಹಾಗೂ  ನಮೀಬಿಯಾ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಿವೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ಈ ಹಿಂದೆ ಪ್ರಮುಖ ಟೂರ್ನಿಗಳನ್ನು ನಡೆಸಿವೆ ಹಾಗೂ  ಮುಂದಿನ ದಶಕದಲ್ಲಿ ಮತ್ತೆ ಆಯೋಜಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News