ಸಹೋದ್ಯೋಗಿಗೆ ಅಶ್ಲೀಲ ಸಂದೇಶ ರವಾನೆ:ಆಸ್ಟ್ರೇಲಿಯಾ ಕ್ರಿಕೆಟ್ ತಂಡ ನಾಯಕತ್ವಕ್ಕೆ ಟಿಮ್ ಪೈನ್ ರಾಜೀನಾಮೆ

Update: 2021-11-19 08:39 GMT

ಮೆಲ್ಬೋರ್ನ್: ತನ್ನ ಸಹೋದ್ಯೋಗಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ತನಿಖೆಗೆ ಒಳಗಾದ ನಂತರ ಟಿಮ್ ಪೈನ್ ಆಸ್ಟ್ರೇಲಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಆಡಳಿತ ಮಂಡಳಿಯು ಪೈನ್  ರಾಜೀನಾಮೆಯನ್ನು ಅಂಗೀಕರಿಸಿದೆ. ಮಂಡಳಿಯ ಸಮಗ್ರತೆಯ ಘಟಕದ ತನಿಖೆಯ ಬಗ್ಗೆ ತನಗೆ ತಿಳಿದಿರುವುದರಿಂದ ತಾನು ಕೈಗೊಂಡಿರುವ ನಿರ್ಧಾರವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಪೈನ್ ಹೇಳಿದರು.

"ಆಸ್ಟ್ರೇಲಿಯದ ಪುರುಷರ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವ ನನ್ನ ನಿರ್ಧಾರವನ್ನು ನಾನು ಪ್ರಕಟಿಸುತ್ತಿದ್ದೇನೆ" ಎಂದು ಪೈನ್ ಟ್ಯಾಸ್ಮೆನಿಯಾದ ರಾಜಧಾನಿ ಹೋಬರ್ಟ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

"ಇದು ನಂಬಲಾಗದಷ್ಟು ಕಷ್ಟಕರವಾದ ನಿರ್ಧಾರ. ಆದರೆ ನನಗೆ, ನನ್ನ ಕುಟುಂಬ ಹಾಗೂ ಕ್ರಿಕೆಟ್‌ಗೆ ಸರಿಯಾದ ನಿರ್ಧಾರವಾಗಿದೆ ಎಂದರು.

ದಕ್ಷಿಣ ಆಫ್ರಿಕಾದಲ್ಲಿ ಆಸ್ಟ್ರೇಲಿಯಾ ತಂಡವು ಚೆಂಡು ವಿರೂಪ  ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್‌  ಅವರು ನಾಯಕತ್ವದಿಂದ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾದ ನಂತರ ಪೈನ್ ಆಸ್ಟ್ರೇಲಿಯಾ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News