ಮೊದಲ ಟೆಸ್ಟ್: ಭೋಜನ ವಿರಾಮಕ್ಕೆ ಭಾರತ 82/1

Update: 2021-11-25 06:47 GMT
Photo:  Sportzpics

ಕಾನ್ಪುರ: ನ್ಯೂಝಿಲ್ಯಾಂಡ್ ವಿರುದ್ಧ ಗುರುವಾರ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದ ಭೋಜನ ವಿರಾಮದ ವೇಳೆಗೆ ಭಾರತವು 1 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ.

ಟಾಸ್ ಜಯಿಸಿದ ಭಾರತದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಮಯಾಂಕ್ ಅಗರ್ವಾಲ್(13) ಹಾಗೂ ಶುಭಮನ್ ಗಿಲ್(ಔಟಾಗದೆ 52)ಇನಿಂಗ್ಸ್ ಆರಂಭಿಸಿದರು. ಕರ್ನಾಟಕದ ಬ್ಯಾಟ್ಸ್ ಮನ್ ಮಯಾಂಕ್ ತಂಡದ ಸ್ಕೋರ್ 21 ರನ್ ತಲುಪಿದಾಗ ವಿಕೆಟ್ ಒಪ್ಪಿಸಿದರು.  ಮಯಾಂಕ್ ಬೇಗನೆ ಔಟಾದ ಬಳಿಕ ಜೊತೆಯಾದ ಗಿಲ್ ಹಾಗೂ ಚೇತೇಶ್ವರ ಪೂಜಾರ(ಔಟಾಗದೆ 15) 2ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 61 ರನ್ ಕಲೆ ಹಾಕಿ ತಂಡವನ್ನು ಆಧರಿಸಿದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ  ಗಿಲ್ ನಾಲ್ಕನೇ ಅರ್ಧಶತಕ ಸಿಡಿಸಿ ಗಮನ ಸೆಳೆದರು.

ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದಾರೆ. ನ್ಯೂಝಿಲ್ಯಾಂಡ್ ತಂಡದಲ್ಲಿ ರಾಚಿನ್ ರವೀಂದ್ರ ಮೊದಲ ಪಂದ್ಯವನ್ನು ಆಡುವ ಅವಕಾಶ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News