ಹರ್ಭಜನ್ ದಾಖಲೆ ಹಿಂದಿಕ್ಕಿ ಭಾರತದ ಪರ ಮೂರನೇ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ ಅಶ್ವಿನ್

Update: 2021-11-29 09:05 GMT

ಹೊಸದಿಲ್ಲಿ: ರವಿಚಂದ್ರನ್ ಅಶ್ವಿನ್ ಸೋಮವಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎಂಬ ಹೊಸ ದಾಖಲೆ ನಿರ್ಮಿಸಿದರು.

ಈ ದಾಖಲೆಯ ಮೂಲಕ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಇಲೈಟ್  ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಮೊದಲ ಟೆಸ್ಟ್‌ನ ಐದನೇ ದಿನದಂದು ಅವರು ಈ ಸಾಧನೆ ಮಾಡಿದರು.

ಕಿವೀಸ್ ಉಪನಾಯಕ ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡಿದ ಅಶ್ವಿನ್ ಈ ಮೈಲಿಗಲ್ಲನ್ನು ತಲುಪಿದರು.

 ಮೊದಲ ಟೆಸ್ಟ್‌ಗೆ ಮುಂಚಿತವಾಗಿ, ಹರ್ಭಜನ್ ಸಿಂಗ್ ಅವರ 417 ವಿಕೆಟ್‌ಗಳ ದಾಖಲೆ ಮುರಿಯಲು ಅಶ್ವಿನ್‌ಗೆ ಐದು ವಿಕೆಟ್‌ಗಳ ಅಗತ್ಯವಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ, ಅಶ್ವಿನ್ ಮೂರು ವಿಕೆಟ್‌ಗಳನ್ನು ಕಬಳಿಸಿ  ಒಟ್ಟು ವಿಕೆಟ್ ಸಂಖ್ಯೆಯನ್ನು 416ಕ್ಕೆ ತಲುಪಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ದಿನವಾದ ರವಿವಾರ  ಲ್ಯಾಥಮ್ ಔಟ್ ಮಾಡಿ ಹರ್ಭಜನ್ ದಾಖಲೆ ಸರಿಗಟ್ಟಿದ್ದರು.

ಅನಿಲ್ ಕುಂಬ್ಳೆ ಹಾಗೂ  ಕಪಿಲ್ ದೇವ್ ಮಾತ್ರ ಭಾರತದ ಪರ ಅಶ್ವಿನ್ (418) ಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಲೆಜೆಂಡರಿ ಲೆಗ್ ಸ್ಪಿನ್ನರ್ ಕುಂಬ್ಳೆ ಅವರು 132 ಟೆಸ್ಟ್‌ಗಳಲ್ಲಿ 619 ವಿಕೆಟ್ ಗಳನ್ನು ಪಡೆದಿದ್ದರೆ, ಭಾರತದ ಮಾಜಿ ನಾಯಕ ಕಪಿಲ್ ದೇವ್ 131 ಪಂದ್ಯಗಳಲ್ಲಿ 434 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News