ಅನಿವಾಸಿಗಳು ವಾಸಿಸಲು ಇಷ್ಟಪಡುವ ನಗರಗಳ ಪಟ್ಟಿಯಲ್ಲಿ ನಂ.1 ಯಾವುದು ಗೊತ್ತೇ ?

Update: 2021-12-04 19:04 GMT

ಲಂಡನ್, ಡಿ.4: ಮಲೇಶ್ಯದ ರಾಜಧಾನಿ ಕೌಲಾಲಂಪುರವು 2021ರಲ್ಲಿ ಅನಿವಾಸಿಗಳು ನೆಲೆಸಲು ಹಾಗೂ ಕೆಲಸ ಮಾಡಲು ಅತ್ಯಂತ ಹೆಚ್ಚು ಇಷ್ಟಪಡುವ ತಾಣವಾಗಿದೆ ಎಂದು ಇತ್ತೀಚೆಗೆ ಸಮೀಕ್ಷಾ ವರದಿಯೊಂದು ತಿಳಿಸಿದೆ. ದಕ್ಷಿಣ ಸ್ಪೇನ್‌ನ ಬಂದರು ನಗರ ಮಾಲಾಗಾ ಹಾಗೂ ದುಬೈ ಕ್ರಮವಾಗಿ ಎರಡನೆ ಹಾಗೂ ಮೂರನೇ ಸ್ಥಾನವನ್ನು ಪಡೆದಿವೆ. ಈ ಮೂರು ನಗರಗಳಲ್ಲಿ ಭೌಗೋಳಿಕವಾಗಿ ವೈವಿಧ್ಯಮಯವಾಗಿರುವುದೇ, ಅನಿವಾಸಿಗಳು ಅಲ್ಲಿ ನೆಲೆಸಲು ಇಷ್ಟಪಡುತ್ತಿರುವುದಕ್ಕೆ ಮುಖ್ಯ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಹೇಳಿದೆ.

40 ಲಕ್ಷಕ್ಕೂ ಅಧಿಕ ಜಾಗತಿಕ ಸದಸ್ಯರನ್ನು ಹೊಂದಿರುವ ಆನ್‌ಲೈನ್ ಅನಿವಾಸಿ ಸಮುದಾಯವಾದ ಇಂಟರ್‌ನೇಶನ್ಸ್ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿತ್ತು. 57 ನಗರಗಳ ಪಟ್ಟಿಯಲ್ಲಿ ಜಗತ್ತಿನ ಬೃಹತ್ ನಗರಗಳಾದ ನ್ಯೂಯಾರ್ಕ್, ಮಾಸ್ಕೋ ಹಾಗೂ ಪ್ಯಾರಿಸ್, ಅನಿವಾಸಿಗಳು ಕೆಲಸ ಮಾಡಲು ಹಾಗೂ ವಾಸಿಸಲು ಇಷ್ಟಪಡುವಂತಹ ಕಟ್ಟಕಡೆಯ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕಳೆದ ಜನವರಿಯಲ್ಲಿ ನಡೆದ ಈ ಸಮೀಕ್ಷೆಯಲ್ಲಿ 186 ದೇಶಗಳಲ್ಲಿ ವಾಸಿಸುವ 1200 ಮಂದಿ ಪಾಲ್ಗೊಂಡಿದ್ದರು. ಸಮೀಕ್ಷಾ ವರದಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಗಿತತು. ಜೀವನದ ಗುಣಮಟ್ಟ, ಸುಲಭವಾಗಿ ನೆಲೆಸಲು ಇರುವ ಅವಕಾಶ,ವೈಯಕ್ತಿಕ ಹಣಕಾಸು ಸ್ಥಿತಿಗತಿ ಹಾಗೂ ವೃತ್ತಿ ಈ ಮೂರು ಶ್ರೇಣಿಗಳಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಇರುವ ಸಂತೃಪ್ತಿಯ ಮಾನದಂಡದ ಆಧಾರದಲ್ಲಿ ನಗರಗಳಿಗೆ ರೇಟಿಂಗ್ ಅನ್ನು ನೀಡಲಾಗಿದೆ.

ನೆಲೆಸುವುದಕ್ಕೆ ಇರುವ ಸುಲಭ ಅವಕಾಶ ಹಾಗೂ ಸ್ಥಳೀಯ ಸ್ನೇಹಶೀಲತೆಯ ಕಾರಣದಿಂದಾಗಿ ತಾವು ಈ ನಗರಗಳನ್ನು ಆಯ್ಕೆ ಮಾಡಿರುವುದಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡವರು ತಿಳಿಸಿದ್ದಾರೆ. ಕೆಲವು ದುಬೈ ಹಾಗೂ ಮಲಾಗಾದಲ್ಲಿರುವ ಉನ್ನತ ಗುಣಮಟ್ಟದ ಜೀವನವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ, ಇನ್ನು ಕೆಸವರು ಕೌಲಾಲಂಪುರ ಹಾಗೂ ಮಲಾಗಾದಲ್ಲಿ ಜೀವನನಿರ್ವಹಣೆ ಭರಿಸುವುದಕ್ಕೆ ಸಾಧ್ಯವಾಗುವಂತದ್ದು ಎಂದು ಅಭಿಪ್ರಾಯಿಸಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.65ರಷ್ಟು ಮಂದಿ ತಾವು ಸಾಮಾನ್ಯವಾಗಿ ಕೌಲಾಲಂಪುರದ ನಗರದಲ್ಲಿ ವಾಸಿಸುವುದಕ್ಕೆ ಇಚ್ಛಿಸುವುದಾಗಿ ಹೇಳಿದ್ದಾರೆ. ಶೇ.76 ಮಂದಿ ಮಲಾಗಾ ಹಾಗೂ ಶೇ.72 ಮಂದಿ ದುಬೈಯಲ್ಲಿ ವಾಸಿಸಲು ಬಯಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News