ಎರಡನೇ ಟೆಸ್ಟ್:‌ ನ್ಯೂಝಿಲ್ಯಾಂಡ್‌ ತಂಡಕ್ಕೆ 540 ರನ್‌ ಗಳ ಬೃಹತ್‌ ಮೊತ್ತದ ಗುರಿ ನೀಡಿದ ಭಾರತ

Update: 2021-12-05 09:21 GMT
Photo: PTI

ಮುಂಬೈ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲ್ಯಾಂಡ್‌ ತಂಡಗಳ ವಿರುದ್ಧದ ಎರಡನೇ ಟೆಸ್ಟ್‌ ನ ಮೂರನೇ ದಿನದಂದು ಭಾರತ ತಂಡವು 276/7 ರನ್‌ ಗಳಿಗೆ ತನ್ನ ಎರಡನೇ ಇನ್ನಿಂಗ್ಸ್‌ ಅನ್ನು ಡಿಕ್ಲೇರ್‌ ಮಾಡಿದ್ದು, ನ್ಯೂಝಿಲ್ಯಾಂಡ್‌ ತಂಡಕ್ಕೆ 540 ರನ್‌ ಗಳ ರನ್‌ ಗಳ ಗುರಿಯನ್ನು ನೀಡಿದೆ. 

ಮಯಾಂಕ್ ಅಗರವಾಲ್ 62 ರನ್ ಗಳಿಸಿದರೆ, ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ ತಲಾ 47 ರನ್ ಗಳಿಸಿದರು. ಅಕ್ಷರ್ ಪಟೇಲ್ 26 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ 41 ರನ್ ಗಳಿಸಿದರು.

ಅತಿಥೇಯ ನ್ಯೂಝಿಲ್ಯಾಂಡ್‌ ತಂಡದಿಂದ 10 ವಿಕೆಟ್‌ ಸಾಧನೆ ಮಾಡಿದ್ದ ಅಜಾಝ್‌ ಪಟೇಲ್‌ ಇನ್ನೂ ನಾಲ್ಕು ವಿಕೆಟ್‌ ಗಳನ್ನು ಪಡೆದು ಮಿಂಚಿದರು. 225 ರನ್‌ ಗಳಿಗೆ 14 ವಿಕೆಟ್‌ ಗಳನ್ನು ಪಡೆದ ಅವರು ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇದಕ್ಕೂ ಮೊದಲು, ಭಾರತವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ ಗಳಿಗೆ ಆಲೌಟ್‌ ಆದ ನಂತರ ಟಾಮ್ ಲ್ಯಾಥಮ್ ನೇತೃತ್ವದ ತಂಡವನ್ನು 62 ರನ್‌ಗಳಿಗೆ ಆಲೌಟ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News