ದ್ವಿತೀಯ ಟೆಸ್ಟ್:ಸೋಲಿನ ಸುಳಿಯಲ್ಲಿ ನ್ಯೂಝಿಲ್ಯಾಂಡ್, ಭಾರತ ವಿರುದ್ಧ 5 ವಿಕೆಟ್‌ಗೆ 140 ರನ್

Update: 2021-12-05 12:16 GMT
Photo: BCCI

 ಮುಂಬೈ, ಡಿ.5: ದ್ವಿತೀಯ ಟೆಸ್ಟ್ ಪಂದ್ಯದ ಗೆಲ್ಲಲು ಕಠಿಣ ಸವಾಲು ಪಡೆದಿರುವ ನ್ಯೂಝಿಲ್ಯಾಂಡ್ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್(3-27) ಸ್ಪಿನ್ ಮೋಡಿಗೆ ತತ್ತರಿಸಿ 3ನೇ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ.

ಗೆಲ್ಲಲು 540 ರನ್ ಬೃಹತ್ ಗುರಿ ಪಡೆದಿರುವ ಕಿವೀಸ್ ಅಗ್ರ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

ಮೂರನೇ ದಿನವಾದ ರವಿವಾರ ವಿಕೆಟ್ ನಷ್ಟವಿಲ್ಲದೆ 69 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕಿವೀಸ್ ಗೆಲುವಿಗೆ ಕಠಿಣ ಗುರಿ ನೀಡಿತು.

ನ್ಯೂಝಿಲ್ಯಾಂಡ್ ಪರ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟರ್ ಡರ್ಲ್ ಮಿಚೆಲ್(60, 92 ಎಸೆತ, 7 ಬೌಂಡರಿ, 2 ಸಿಕ್ಸರ್)ಒಂದಷ್ಟು ಹೋರಾಟ ನೀಡಿದರೆ, ಉಳಿದ ಹೆನ್ರಿ ನಿಕೊಲ್ಸ್(ಔಟಾಗದೆ 36, 86 ಎಸೆತ) ಹಾಗೂ ವಿಲ್ ಯಂಗ್(20, 41 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ವಿಕೆಟ್‌ಕೀಪರ್ ಬ್ಲಂಡಲ್(0) ಖಾತೆ ತೆರೆಯುವ ಮೊದಲೇ ರನೌಟಾದರು. ರಚಿನ್ ರವೀಂದ್ರ(2) ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News