×
Ad

ಯುನೆಸ್ಕೋ ಪರಂಪರೆಯ ಪಟ್ಟಿಗೆ ಅರಬ್ ಕ್ಯಾಲಿಗ್ರಫಿ ಸೇರ್ಪಡೆ

Update: 2021-12-15 22:37 IST
Twitter.com/@Milyasmayo

ರಿಯಾದ್, ಡಿ.15: ಸೌದಿ ಅರೆಬಿಯಾ ಮತ್ತು ಅರಬ್ ಲೀಗ್ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸಂಘಟನೆಯ ನೇತೃತ್ವದಲ್ಲಿ 15 ಅರಬ್ ದೇಶಗಳ ಯಶಸ್ವೀ ಸಹಯೋಗದ ಪರಿಣಾಮ ಕ್ಯಾಲಿಗ್ರಾಪಿ, ಜ್ಞಾನ, ಕೌಶಲ್ಯ ಮತ್ತು ಸಂಪ್ರದಾಯಗಳನ್ನು ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.

ಧಾರ್ಮಿಕ ಪಠ್ಯಗಳಲ್ಲಿ ಬಳಕೆಯ ಪ್ರಾಮುಖ್ಯತೆಯ ಜತೆಗೆ, ಲಿಪಿಶಾಸ್ತ್ರವು ಇತಿಹಾಸದುದ್ದಕ್ಕೂ ಅರಬಿಕ್ ಭಾಷೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಶತಮಾನಗಳಿಂದಲೂ ಅರಬ್ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಮೌಲ್ಯಗಳ ವರ್ಗಾವಣೆ ಮತ್ತು ಪ್ರಸಾರಕ್ಕೆ ನೆರವಾಗಿದ್ದು ಅರಬ್ಬರಲ್ಲಿ ಆತ್ಮಾಭಿಮಾನದ ಭಾವನೆಯನ್ನು ಮೂಡಿಸಿದೆ ಎಂದು ಯುನೆಸ್ಕೋ ಹೇಳಿದೆ.


ಈ ಘೋಷಣೆಯನ್ನು ಸ್ವಾಗತಿಸಿರುವ ಸೌದಿಯ ಸಂಸ್ಕೃತಿ ಸಚಿವ ಯುವರಾಜ ಬದ್ರ್ ಬಿನ್ ಅಬ್ದುಲ್ಲಾ ಬಿನ್ ಫರ್ಹಾನ್, ಅರಬಿಕ್ ಸಂಸ್ಕೃತಿಯ ಈ ಅಮೂಲ್ಯ ಅಂಶವನ್ನು ಯುನೆಸ್ಕೋ ಗುರುತಿಸಲು ಸೌದಿ ಅರೆಬಿಯ ನಿರಂತರ ಪ್ರಯತ್ನ ಮಾಡಿದೆ. ಈ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗುರುತಿಸುವ ಸಲುವಾಗಿ 2020 ಮತ್ತು 2021ನ್ನು ಅರಬಿಕ್ ಲಿಪಿಶಾಸ್ತ್ರದ ವರ್ಷ ಎಂದು ಸಾಂಸ್ಕೃತಿಕ ಇಲಾಖೆ ನಿಯೋಜಿಸುವ ಮೂಲಕ ಅರಬಿಕ್ ಶಿಲ್ಪಶಾಸ್ತ್ರ ಮತ್ತು ಕಲೆಗಳಿಗೆ ತಾನು ಜಾಗತಿಕ ಕೇಂದ್ರ ಎಂದು ಸೌದಿ ಮತ್ತೆ ಸಾಬೀತುಪಡಿಸಿದೆ ಎಂದಿದ್ದಾರೆ.
    
ಲಿಪಿಶಾಸ್ತ್ರ ಅಥವಾ ಕ್ಯಾಲಿಗ್ರಾಫಿ ಇಂದಿನ ದಿನದಲ್ಲಿ ಅತ್ಯಂತ ಜನಪ್ರಿಯವಾಗಿದ್ದು ವರ್ಣಚಿತ್ರ, ಶಿಲ್ಪಶಾಸ್ತ್ರ, ವಿನ್ಯಾಸಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವರ್ಣಚಿತ್ರ, ಶಿಲ್ಪಶಾಸ್ತ್ರ ಮತ್ತು ಗ್ರಾಫಿಟಿ ಅಥವಾ ಭಿತ್ತಿಚಿತ್ರಣಗಳಲ್ಲಿ ಬಳಸಲಾಗುತ್ತಿದೆ. ಅರಬ್ ದೇಶಗಳಿಗೆ ಭೇಟಿ ನೀಡುವವರು ಅರಬಿಕ್ ಭಾಷೆಯ ಆರಂಭಿಕ ಹಂತವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ, ಅಲ್ಉಲಾ ಮತ್ತು ಹಿಮ ನರ್ಜಾನ್ ಸಹಿತ ತಾಣಗಳಲ್ಲಿರುವ ಪ್ರಾಚೀನ ಶಾಸನಗಳಲ್ಲಿ ವೀಕ್ಷಿಸಬಹುದು. ಅರಬ್ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿರುವ ಅರಬಿಕ್ ಲಿಪಿಶಾಸ್ತ್ರವು ಸೌದಿಯ ಇತಿಹಾಸದಲ್ಲಿ ಹಾಸುಹೊಕ್ಕಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News